ಬೇ ಓವಲ್[ಜ.26]: ಬ್ಯಾಟ್ಸ್’ಮನ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ನಿಗದಿತ 50 ಓವರ್’ಗಳಲ್ಲಿ 4 ವಿಕೆಟ್ ಕಳೆದುಕೊಂಡು 324 ರನ್ ಕಲೆಹಾಕಿದ್ದು, ಆತಿಥೇಯ ನ್ಯೂಜಿಲೆಂಡ್’ಗೆ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಧವನ್-ರೋಹಿತ್ ಜೋಡಿ ಭರ್ಜರಿ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್’ಗೆ ಈ ಜೋಡಿ 154 ರನ್’ಗಳ ಜತೆಯಾಟವಾಡಿತು. ರೋಹಿತ್ 38ನೇ ಅರ್ಧಶತಕ ಸಿಡಿಸಿದರೆ, ಧವನ್ 27ನೇ ಅರ್ಧಶತಕ ಸಿಡಿಸಿದರು. ರೋಹಿತ್ 87 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಧವನ್ 66 ರನ್ ಬಾರಿಸಿ ಪೆವಿಲಿಯನ್ ಸೇರಿದರು. ನಾಯಕ ವಿರಾಟ್ ಕೊಹ್ಲಿ[43], ಅಂಬಟಿ ರಾಯುಡು[47] ಅರ್ಧಶತಕದ ಹೊಸ್ತಿಲಲ್ಲಿ ಎಡವಿದರೆ, ಧೋನಿ 48 ರನ್ ಬಾರಿಸಿ ಅಜೇಯರಾಗುಳಿದರು. ಇನ್ನು ಕೊನೆಯಲ್ಲಿ ಅಬ್ಬರಿಸಿ ಕೇದಾರ್ ಜಾದವ್ ಕೇವಲ 10 ಎಸೆತಗಳಲ್ಲಿ 22 ರನ್ ಸಿಡಿಸಿ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸುವಲ್ಲಿ ತಂಡಕ್ಕೆ ನೆರವಾದರು.

ರೋಹಿತ್-ಧವನ್ ಅರ್ಧಶತಕ: ಸಚಿನ್-ಸೆಹ್ವಾಗ್ ದಾಖಲೆ ಉಡೀಸ್

ನ್ಯೂಜಿಲೆಂಡ್ ಪರ ವೇಗಿಗಳಾದ ಟ್ರೆಂಟ್ ಬೌಲ್ಟ್ ಹಾಗೂ ಲ್ಯೂಕಿ ಫರ್ಗ್ಯುಸನ್ ತಲಾ 2 ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್:

ಭಾರತ: 324/4

ರೋಹಿತ್ ಶರ್ಮಾ: 87
ಶಿಖರ್ ಧವನ್: 66
ಟ್ರೆಂಟ್ ಬೌಲ್ಟ್: 61/2
[* ಭಾರತದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]