Asianet Suvarna News Asianet Suvarna News

ರೋಹಿತ್-ಧವನ್ ಅರ್ಧಶತಕ: ಸಚಿನ್-ಸೆಹ್ವಾಗ್ ದಾಖಲೆ ಉಡೀಸ್

ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎನಿಸಿಕೊಂಡಿದ್ದ ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್ ದಾಖಲೆಯನ್ನು ಅಳಿಸಿ ಹಾಕುವಲ್ಲಿ ರೋಹಿತ್-ಧವನ್ ಜೋಡಿ ಯಶಸ್ವಿಯಾಗಿದೆ.

Rohit, Dhawan smash Completes fifties Brakes Sachin Sehwag Record
Author
Mount Maunganui, First Published Jan 26, 2019, 9:10 AM IST

ಬೇ ಓವಲ್[ಜ.26]: ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಅರ್ಧಶತಕ ಸಿಡಿಸಿದ್ದು, ಟೀಂ ಇಂಡಿಯಾಗೆ ಎರಡನೇ ಏಕದಿನ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತಕ್ಕೆ ರೋಹಿತ್-ಧವನ್ ಜೋಡಿ ಶತಕದ ಆರಂಭ ಒದಗಿಸಿ ಕೊಟ್ಟಿದ್ದಾರೆ. ರೋಹಿತ್  62 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಇದು ರೋಹಿತ್ ಶರ್ಮಾ ವೃತ್ತಿಜೀವನದ 38ನೇ ಅರ್ಧಶತಕವಾಗಿದೆ. ರೋಹಿತ್ ಅರ್ಧಶತಕದ ಜತೆಜತೆಯಲ್ಲಿಯೇ ಈ ಜೋಡಿ ನೂರು ರನ್’ಗಳ ಜತೆಯಾಟ ನಿಭಾಯಿಸಿತು. ಇನ್ನು ಶಿಖರ್ ಧವನ್ 53 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇದು ಧವನ್ ಬಾರಿಸಿದ 27ನೇ ಅರ್ಧಶತಕವಾಗಿದೆ. 

ಸಚಿನ್-ಸೆಹ್ವಾಗ್ ದಾಖಲೆ ಉಡೀಸ್: ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎನಿಸಿಕೊಂಡಿದ್ದ ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್ ದಾಖಲೆಯನ್ನು ಅಳಿಸಿ ಹಾಕುವಲ್ಲಿ ರೋಹಿತ್-ಧವನ್ ಜೋಡಿ ಯಶಸ್ವಿಯಾಗಿದೆ. ಏಕದಿನ ಕ್ರಿಕೆಟ್’ನಲ್ಲಿ ಸಚಿನ್-ಸೆಹ್ವಾಗ್ ಜೋಡಿ 13 ಬಾರಿ ಶತಕದ ಜತೆಯಾಟವಾಡಿತ್ತು. ಇದೀಗ ಧವನ್-ರೋಹಿತ್ ಜೋಡಿ 14ನೇ ಬಾರಿಗೆ ಶತಕದ ಜತೆಯಾಟವಾಡುವ ಮೂಲಕ ಆ ದಾಖಲೆಯನ್ನು ಅಳಿಸಿ ಹಾಕಿದೆ. ಟೀಂ ಇಂಡಿಯಾ ಪರ ಒಟ್ಟಾರೆ ಅತಿಹೆಚ್ಚು ಶತಕದ ಜತೆಯಾಟ ಆಡಿದ ದಾಖಲೆ ಸಚಿನ್ ತೆಂಡುಲ್ಕರ್- ಸೌರವ್ ಗಂಗೂಲಿ ಹೆಸರಿನಲ್ಲಿದೆ. ಈ ಜೋಡಿ ಒಟ್ಟು 26 ಬಾರಿ ಶತಕದ ಜತೆಯಾಟ ನಿಭಾಯಿಸಿದೆ. 

Follow Us:
Download App:
  • android
  • ios