ಇದೀಗ ರೋಹಿತ್[33] ಹಾಗೂ ಕೊಹ್ಲಿ[1] ಬ್ಯಾಟಿಂಗ್ ಮುಂದುವರೆಸಿದ್ದು, ಭಾರತ 13.3 ಓವರ್’ಗಳಲ್ಲಿ 80 ರನ್ ಬಾರಿಸಿದೆ.
ಬಾರ್ಬಡೋಸ್[ಅ.29]: ಉತ್ತಮ ಆರಂಭ ಪಡೆದಿದ್ದ ಟೀಂ ಇಂಡಿಯಾ ಶಿಖರ್ ಧವನ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ಅರ್ಧಶತಕದ ಜತೆಯಾಟದ ಬಳಿಕ ಧವನ್ 38 ರನ್ ಬಾರಿಸಿ ಕೀಮೊ ಪೌಲ್’ಗೆ ವಿಕೆಟ್ ಒಪ್ಪಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಟೀಂ ಇಂಡಿಯಾ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ 10 ಓವರ್’ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 56 ರನ್ ಬಾರಿಸಿತ್ತು. 12ನೇ ಓವರ್’ನಲ್ಲಿ ದಾಳಿಗಿಳಿದ ಕೀಮೊ ಪೌಲ್ ಬೌಲಿಂಗ್’ನಲ್ಲಿ ಧವನ್, ಕಿರಾನ್ ಪೋವೆಲ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ.
ಇದೀಗ ರೋಹಿತ್[33] ಹಾಗೂ ಕೊಹ್ಲಿ[1] ಬ್ಯಾಟಿಂಗ್ ಮುಂದುವರೆಸಿದ್ದು, ಭಾರತ 13.3 ಓವರ್’ಗಳಲ್ಲಿ 80 ರನ್ ಬಾರಿಸಿದೆ.