ಮೊದಲ ಓವರ್’ನಲ್ಲಿ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ ತಾವೆಸೆದ ನಾಲ್ಕನೇ ಬಾಲ್’ನಲ್ಲಿ ಆರಂಭಿಕ ಬ್ಯಾಟ್ಸ್’ಮನ್ ಕಿರಾನ್ ಪೋವೆಲ್ ಅವರನ್ನು ಬಲಿ ಪಡೆಯುವಲ್ಲಿ ಸಫಲವಾಗಿದ್ದಾರೆ. ಇದರ ಬೆನ್ನಲ್ಲೇ ಎರಡನೇ ಓವರ್’ನಲ್ಲಿ ಜಸ್ಪ್ರೀತ್ ಬುಮ್ರಾ ವಿಂಡೀಸ್’ನ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಶೈ ಹೋಪ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್’ಗೆ ಅಟ್ಟಿದರು. 

ತಿರುವನಂತಪುರಂ[ನ.01]: ಭಾರತ-ವೆಸ್ಟ್ ಇಂಡೀಸ್ ನಡುವಿನ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಕೆರಿಬಿಯನ್ ಪಡೆಗೆ ಆರಂಭದಲ್ಲೇ ಆಘಾತ ಎದುರಾಗಿದೆ. ವಿಂಡೀಸ್ ಪಡೆಗೆ ಟೀಂ ಇಂಡಿಯಾ ವೇಗಿಗಳು ಮೊದಲೆರಡು ಓವರ್’ಗಳಲ್ಲೇ ಶಾಕ್ ನೀಡಿದ್ದಾರೆ.

Scroll to load tweet…
Scroll to load tweet…

ಮೊದಲ ಓವರ್’ನಲ್ಲಿ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ ತಾವೆಸೆದ ನಾಲ್ಕನೇ ಬಾಲ್’ನಲ್ಲಿ ಆರಂಭಿಕ ಬ್ಯಾಟ್ಸ್’ಮನ್ ಕಿರಾನ್ ಪೋವೆಲ್ ಅವರನ್ನು ಬಲಿ ಪಡೆಯುವಲ್ಲಿ ಸಫಲವಾಗಿದ್ದಾರೆ. ಇದರ ಬೆನ್ನಲ್ಲೇ ಎರಡನೇ ಓವರ್’ನಲ್ಲಿ ಜಸ್ಪ್ರೀತ್ ಬುಮ್ರಾ ವಿಂಡೀಸ್’ನ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಶೈ ಹೋಪ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್’ಗೆ ಅಟ್ಟಿದರು. ಕಳೆದ ಪಂದ್ಯದಲ್ಲೂ ಹೋಪ್ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದರು. 2 ಓವರ್ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಸ್ ತಂಡ 2 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. 

ಈಗಾಗಲೇ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಇಂದಿನ ಪಂದ್ಯವನ್ನು ಜಯಿಸುವುದರೊಂದಿಗೆ ವಿರಾಟ್ ಪಡೆ ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾದಲ್ಲಿದೆ.