Asianet Suvarna News Asianet Suvarna News

ಕ್ರಿಕೆಟ್ ಸೀಕ್ರೆಟ್: ಕ್ರಿಕೆಟ್ ಜಗತ್ತಿನಲ್ಲಿ ಜೂನ್.6 ರ ವಿಶೇಷತೆ ಏನು?

ಕ್ರಿಕೆಟ್ ಇತಿಹಾಸದಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಜೂನ್. 6 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

Cricket Flashback On this Day

ಬೆಂಗಳೂರು(ಜೂನ್.6):  ಟೀಮ್ಇಂಡಿಯಾದ ಕ್ಲಾಸ್ ಪ್ಲೇಯರ್ ಅಜಿಂಕ್ಯ ರಹಾನೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. 30ನೇ ವಸಂತಕ್ಕೆ ಕಾಲಿಟ್ಟ ರಹಾನೆಗೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಶುಭ ಹಾರೈಸಿದ್ದಾರೆ.

 

 

ಜೂನ್ 6, 1988ರಲ್ಲಿ ಹುಟ್ಟಿದ ರಹಾನೆ, 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಮಾದರಿಯಲ್ಲಿ ಹೆಚ್ಚಿನ ಯಶಸ್ಸು ಕಂಡಿರುವ ರಹಾನೆ, ಜುಲೈ 14 ರಿಂದ ಆರಂಭಗೊಳ್ಳಲಿರುವ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನ ಮುನ್ನಡೆಸಲಿದ್ದಾರೆ. 

44 ಟೆಸ್ಟ್ ಪಂದ್ಯಗಳಿಂದ 2883 ರನ್ ಸಿಡಿಸಿರುವ ರಹಾನೆ, 9 ಶತಕ ಹಾಗೂ 12 ಅರ್ಧಶತಕ ಸಿಡಿಸಿದ್ದಾರೆ. ವಿಶೇಷ ಅಂದರೆ, ವಿದೇಶಿ ಪಿಚ್‌ಗಳಲ್ಲಿ ರಹಾನೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 90 ಏಕದಿನ ಪಂದ್ಯಗಳಿಂದ 2962 ರನ್ ದಾಖಲಿಸಿರುವ ರಹಾನೆ, 3 ಶತಕ ಹಾಗೂ 24 ಅರ್ಧಶತಕ ಬಾರಿಸಿದ್ದಾರೆ. 

31ನೇ ವರ್ಷಕ್ಕೆ ಕಾಲಿಟ್ಟಿರುವ ರಹಾನೆಗೆ ಈ ವರ್ಷ ಸಂತಸತ ತರಲಿ. ಇಷ್ಟೇ ಅಲ್ಲ ಅತ್ಯುತ್ತಮ ಪ್ರದರ್ಶನದ ಮೂಲಕ ಮೂರು ಮಾದರಿಯಲ್ಲೂ ಸ್ಥಾನ ಭದ್ರಪಡಿಸಿಕೊಳ್ಳಲಿ ಅನ್ನೋದೆ ಅಭಿಮಾನಿಗಳ ಆಶಯ.
 

Follow Us:
Download App:
  • android
  • ios