ಇಲ್ಲಿನ ಕ್ರಿಕೆಟ್‌ ಪ್ರೇಮಿಗಳು ವಿಂಡೀಸ್‌ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಧೋನಿ ಮೇಲೆ ತಮಗಿರುವ ಪ್ರೀತಿ, ಅಭಿಮಾನವನ್ನು ಪ್ರದರ್ಶಿಸಲು ಗ್ರೀನ್‌ಫೀಲ್ಡ್‌ ಕ್ರೀಡಾಂಗಣದ ಹೊರಗೆ 35 ಅಡಿ ಕಟೌಟ್‌ ಅಳವಡಿಸಿದ್ದಾರೆ.

ತಿರುವನಂತಪುರ(ನ.01): ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಲಯ ಕಳೆದುಕೊಂಡಿರಬಹುದು, ಆದರೆ ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. 

ಇಲ್ಲಿನ ಕ್ರಿಕೆಟ್‌ ಪ್ರೇಮಿಗಳು ವಿಂಡೀಸ್‌ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಧೋನಿ ಮೇಲೆ ತಮಗಿರುವ ಪ್ರೀತಿ, ಅಭಿಮಾನವನ್ನು ಪ್ರದರ್ಶಿಸಲು ಗ್ರೀನ್‌ಫೀಲ್ಡ್‌ ಕ್ರೀಡಾಂಗಣದ ಹೊರಗೆ 35 ಅಡಿ ಕಟೌಟ್‌ ಅಳವಡಿಸಿದ್ದಾರೆ. ‘ಕೇರಳ ಧೋನಿ ಅಭಿಮಾನಿಗಳ ಸಂಘ’ ಈ ಕಟೌಟ್‌ ಹಾಕಿದ್ದು, ಭಾರತದ ಯಶಸ್ವಿ ನಾಯಕನನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಿದೆ.

Scroll to load tweet…

ಏಕದಿನ ಕ್ರಿಕೆಟ್’ನಲ್ಲಿ ಪ್ರಸಕ್ತ ವರ್ಷ ಧೋನಿ ಕಳಪೆ ಪ್ರದರ್ಶನ ತೋರುತ್ತಿದ್ದು, ಆಡಿದ 12 ಪಂದ್ಯಗಳಲ್ಲಿ ಕೇವಲ 25ರ ಸರಾಸರಿಯಲ್ಲಿ 252 ರನ್ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಾದರೂ ಧೋನಿ ಸಿಡಿಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.