2016ರಲ್ಲೇ ಸೀಮಿತ ಓವರ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಹೆರಾತ್‌, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಬಳಿಕ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು. 1999ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಹೆರಾತ್‌ 93 ಪಂದ್ಯಗಳಲ್ಲಿ 433 ವಿಕೆಟ್‌ ಕಬಳಿಸಿ, ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ಗಾಲೆ[ನ.10]: ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಮುಕ್ತಾಯಗೊಳ್ಳುತ್ತಿದ್ದಂತೆ ಶ್ರೀಲಂಕಾದ 40 ವರ್ಷದ ಸ್ಪಿನ್ನರ್‌ ರಂಗನಾ ಹೆರಾತ್‌ರ ಕ್ರಿಕೆಟ್‌ ಬದುಕು ಅಂತ್ಯಗೊಂಡಿತು. ಹೆರಾತ್ ಸೋಲಿನೊಂದಿಗೆ ಕ್ರಿಕೆಟ್ ಬದುಕಿಗೆ ಗುಡ್’ಬೈ ಹೇಳಿದ್ದಾರೆ.

2016ರಲ್ಲೇ ಸೀಮಿತ ಓವರ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಹೆರಾತ್‌, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಬಳಿಕ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು. 1999ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಹೆರಾತ್‌ 93 ಪಂದ್ಯಗಳಲ್ಲಿ 433 ವಿಕೆಟ್‌ ಕಬಳಿಸಿ, ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಜತೆಗೆ ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಎಡಗೈ ಸ್ಪಿನ್ನರ್‌ ಎನ್ನುವ ಹೆಗ್ಗಳಿಕೆ ಸಹ ಅವರಿಗೆ ಸಲ್ಲುತ್ತದೆ.

ಲಂಕಾ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ
ಇಲ್ಲಿ ಶುಕ್ರವಾರ ಮುಕ್ತಾಯವಾದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 211 ರನ್‌ಗಳ ಗೆಲುವು ದಾಖಲಿಸಿದೆ. ಈ ಮೂಲಕ ತವರಿನಾಚೆ 13 ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ ಗೆಲುವು ಸಾಧಿಸಿದೆ. ಪಂದ್ಯದ 4ನೇ ದಿನವಾದ ಶುಕ್ರವಾರ ವಿಕೆಟ್‌ ನಷ್ಟವಿಲ್ಲದೆ 15 ರನ್‌ಗಳಿಂದ 2ನೇ ಇನಿಂಗ್ಸ್‌ ಮುಂದುವರಿಸಿದ ಶ್ರೀಲಂಕಾ 250 ರನ್‌ಗಳಿಗೆ ಆಲೌಟ್‌ ಆಯಿತು.

ಇಂಗ್ಲೆಂಡ್‌ ಪರ ಮೊಯಿನ್‌ ಅಲಿ 4, ಜಾಕ್‌ ಲೀಚ್‌ 3 ವಿಕೆಟ್‌ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ 139 ರನ್‌ಗಳ ಮುನ್ನಡೆಯೊಂದಿಗೆ ಇಂಗ್ಲೆಂಡ್‌, ಲಂಕಾಕ್ಕೆ 462 ರನ್‌ಗಳ ಗುರಿ ನೀಡಿತ್ತು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ 342 ಮತ್ತು 322, ಶ್ರೀಲಂಕಾ 203 ಮತ್ತು 250