ನವದೆಹಲಿ[ಸೆ.11]: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಟಗಾರರ ವೇತನ ಪಾವತಿಸಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗಿಂತ ವೇಗಿ ಭುವನೇಶ್ವರ್ ಕುಮಾರ್ ಅಧಿಕ ವೇತನ ಪಡೆದಿದ್ದಾರೆ. ಇನ್ನು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವಧಿಗೂ ಮುನ್ನವೇ 3 ತಿಂಗಳ ವೇತನ ಪಡೆದಿರುವ ಮಾಹಿತಿ ಬಹಿರಂಗಗೊಂಡಿದೆ.

ರವಿಶಾಸ್ತ್ರಿಗೆ ಬಿಸಿಸಿಐ 3 ತಿಂಗಳಿಗೆ ಒಟ್ಟು 2.05 ಕೋಟಿ ವೇತನ ನೀಡಿದೆ. ಬಿಸಿಸಿಐ ಸೋಮವಾರ ಆಟಗಾರರ ಮತ್ತು ಕೋಚ್‌ಗಳ ವೇತನ, ನವೀಕರಣ, ಪ್ರಶಸ್ತಿ ಹಾಗೂ ಪಂದ್ಯಗಳ ಸಂಭಾವನೆ ಹಣ ಪಾವತಿಸಿರುವ ಮಾಹಿತಿಯನ್ನು ಬಹಿರಂಗ ಪಡಿಸಿದೆ. 

ಇದನ್ನು ಓದಿ: ಕೊಹ್ಲಿ ನಾಯಕತ್ವದ ಬಗ್ಗೆ ಕೊನೆಗೂ ತುಟಿಬಿಚ್ಚಿದ ಆರ್’ಸಿಬಿ..!

ವೇಗಿ ಭುವನೇಶ್ವರ್ ಕುಮಾರ್ ಅತಿ ಹೆಚ್ಚು ₹3.73 ಕೋಟಿ ವೇತನ ಪಡೆದಿದ್ದರೆ, ನಾಯಕ ವಿರಾಟ್ ಕೊಹ್ಲಿ, ₹1.25 ಕೋಟಿ ವೇತನ ಪಡೆದಿದ್ದಾರೆ. ರೋಹಿತ್ ಶರ್ಮಾ, ₹1.42 ಕೋಟಿ, ಧವನ್
₹2.83 ಕೋಟಿ, ಪೂಜಾರ ₹2.80 ಕೋಟಿ ವೇತನ ಪಡೆದಿದ್ದಾರೆ.