ಅಬುಧಾಬಿ[ನ.06]: ಚುಟುಕು ಕ್ರಿಕೆಟ್’ನಲ್ಲಿ ಪಾಕಿಸ್ತಾನದ ಗೆಲುವಿನ ನಾಗಾಲೋಟಾ ಮುಂದುವರೆದಿದ್ದು, ದಾಖಲೆಯ 11ನೇ ಸರಣಿ ಜಯ ದಾಖಲಿಸಿದೆ.

ನ್ಯೂಜಿಲೆಂಡ್‌ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಪಾಕಿಸ್ತಾನ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. ಇದರೊಂದಿಗೆ 2018ರಲ್ಲಿ ಆಡಿರುವ 19 ಪಂದ್ಯಗಳಲ್ಲಿ 17ನೇ ಗೆಲುವು ದಾಖಲಿಸಿದೆ. ತಂಡಕ್ಕಿದು ಸತತ 11ನೇ ಟಿ20 ಸರಣಿ ಗೆಲುವಾಗಿದ್ದು, ವಿಶ್ವ ದಾಖಲೆ ಎನಿಸಿದೆ. 

ಭಾನುವಾರ ರಾತ್ರಿ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಕಿವೀಸ್‌ ವಿರುದ್ಧ 47 ರನ್‌ಗಳ ಗೆಲುವು ಸಾಧಿಸಿತು. ಪಾಕಿಸ್ತಾನ ಮೊದಲು ಬ್ಯಾಟ್‌ ಮಾಡಿ 166 ರನ್‌ ಕಲೆಹಾಕಿತು. ಕಠಿಣ ಸವಾಲು ಬೆನ್ನಟ್ಟಿದ ಕಿವೀಸ್‌, 119 ರನ್‌ಗಳಿಗೆ ಆಲೌಟ್‌ ಆಯಿತು.