ಬಾಲಿವುಡ್ ನಿರ್ಮಾಪಕಿ, ಗೆಳತಿ ವಂದನಾ ಜೈನ್ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವ ಕ್ರಿಕೆಟರ್ ಅಮಿತ್ ಮಿಶ್ರಾ ಅವರಿಗೆ ಮತ್ತೆ ಸಂಕಟ ಶುರುವಾಗಿದೆ.
ಬೆಂಗಳೂರು(ನ.23): ಬಾಲಿವುಡ್ ನಿರ್ಮಾಪಕಿ, ಗೆಳತಿ ವಂದನಾ ಜೈನ್ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವ ಕ್ರಿಕೆಟರ್ ಅಮಿತ್ ಮಿಶ್ರಾ ಅವರಿಗೆ ಮತ್ತೆ ಸಂಕಟ ಶುರುವಾಗಿದೆ.
ಈ ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ. ನ್ಯಾಯಮೂರ್ತಿ ಆನಂದಬೈರಾ ರೆಡ್ಡಿ ಅವರಿದ್ದ ನ್ಯಾಯಪೀಠ ತಡೆಯಾಜ್ಞೆಯನ್ನು ತೆರವುಗೊಳಿಸಿ, ತನಿಖೆ ಮುಂದುವರೆಸಲು ಆದೇಶಿಸಿದ್ದಾರೆ.
ಕ್ರಿಕೆಟರ್ ಅಮಿತ್ ಮಿಶ್ರಾ ವಿರುದ್ಧ ಅಶೋಕನಗರ ಪೊಲೀಸರು ಈಗಾಗಲೇ ಚಾರ್ಜ್ ಶೀಟ್ ಹಾಕಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಮ್ಮೆ ಮಿಶ್ರಾರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ನಂತರ ಮಿಶ್ರಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
