ನ.4ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ಪರ್ತ್’ನಲ್ಲಿ ನಡೆಯಲಿದೆ. ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಂಡ ಕೂಡಿಕೊಂಡಿದ್ದಾರೆ.
ಸಿಡ್ನಿ(ಅ.28): ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಆಸ್ಪ್ರೇಲಿಯಾ ತಂಡಕ್ಕೆ ಆ್ಯರೋನ್ ಫಿಂಚ್ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ.
ಟೆಸ್ಟ್ ತಂಡದ ನಾಯಕ ಟಿಮ್ ಪೈನ್ ಮತ್ತು ಉಪನಾಯಕ ಮಿಚೆಲ್ ಮಾರ್ಷ್’ರನ್ನು, ಏಕದಿನ ತಂಡದ ನಾಯಕ ಮತ್ತು ಉಪನಾಯಕ ಸ್ಥಾನದಿಂದ ಕೆಳಗಿಳಿಸಲಾಗಿದೆ. ಫಿಂಚ್, ಟಿ20 ತಂಡಕ್ಕೂ ತಾತ್ಕಾಲಿಕ ನಾಯಕನಾಗಿದ್ದಾರೆ. ಜೋಶ್ ಹ್ಯಾಜಲ್’ವುಡ್ ಮತ್ತು ಅಲೆಕ್ಸ್ ಕಾರಿ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ನ.4ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ಪರ್ತ್’ನಲ್ಲಿ ನಡೆಯಲಿದೆ. ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಂಡ ಕೂಡಿಕೊಂಡಿದ್ದಾರೆ.