ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ  ಜೊತೆಯಾಗಿ ಹೆಜ್ಜೆಹಾಕಿದ್ದಾರೆ. ಕಿಂಗ್ ಆಫ್ ರೋಮ್ಯಾನ್ಸ್ ಶಾರುಖ್ ಹಾಗೂ ಚಾಂಪಿಯನ್ ಹಾಡಿನ ರೂವಾರಿ ಬ್ರಾವೋ ಜುಗುಲ್ ಬಂಧಿ ಹೇಗಿದೆ? ಇಲ್ಲಿದೆ ನೋಡಿ.

ಪೋರ್ಟ್ ಆಫ್ ಸ್ಪೇನ್(ಆ.11): ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿ ರಂಗು ದಿನದಿನಕ್ಕೆ ಹೆಚ್ಚುತ್ತಿದೆ. ವಿಂಡೀಸ್ ಬ್ಯಾಟ್ಸ್‌ಮನ್‌ಗಳ ಅಬ್ಬರ ಜೊತೆಗೆ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡದ ಆಂಥಮ್ ಹಾಡು ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ.

ಬಾಲಿವುಡ್ ನಟ ಶಾರುಖ್ ಖಾನ್ ಸಹ ಮಾಲೀಕತ್ವದ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಆಂಥಮ್ ಹಾಡನ್ನ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಹಾಡಿನಲ್ಲಿ ಶಾರುಖ್ ಖಾನ್ ಹಾಗೂ ತಂಡದ ಸ್ಟಾರ್ ಪ್ಲೇಯರ್ ಡ್ವೇನ್ ಬ್ರಾವೋ ಹೆಜ್ಜೆ ಹಾಕಿದ್ದಾರೆ.

Scroll to load tweet…

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಹಾಗೂ ಚಾಂಪಿಯನ್ ಹಾಡಿನ ಮೂಲಕ ಭಾರಿ ಜನಮನ್ನಣೆಗಳಿಸಿರುವ ಕ್ರಿಕೆಟಿಗ ಡ್ವೇನ್ ಬ್ರಾವೋ ಒಳಗೊಂಡ ಆಂಥಮ್ ಹಾಡು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಬಾಲ್ ದೆಮ್ ಔಟ್ ಅನ್ನೋ ಆಂಥಮ್ ಹಾಡು ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಭಿಮಾನಿಗಳು ಗುನುಗುತ್ತಿದ್ದಾರೆ. ಈ ಹಾಡಿಗೆ ಡ್ಪೇನ್ ಬ್ರಾವೋ ಕೂಡ ಸಾಹಿತ್ಯ ಬರೆದಿದ್ದಾರೆ.