ವೆಲ್ಲಿಂಗ್ಟನ್(ಸೆ.19): ಮುಂದಿನ ತಿಂಗಳು 16ರಿಂದ ಆರಂಭವಾಗುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧದ 5 ಏಕದಿನ ಪಂದ್ಯದ ಸರಣಿಗಾಗಿ ನ್ಯೂಜಿಲೆಂಡ್ ತಂಡದಲ್ಲಿ ಕೋರೆ ಆ್ಯಂಡರ್ಸನ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಏಕದಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಿವೀಸ್ ತಂಡದ ನೆರವಿಗೆ ಬರುವ ಆ್ಯಂಡರ್ಸನ್ ಟ್ರಂಪ್ ಕಾರ್ಡ್ ಆಟಗಾರ ಎನಿಸಿದ್ದಾರೆ. ಬ್ಯಾಟ್ಸ್‌ಮನ್ ಆಂಟನ್ ಡವ್‌ರೀಚ್, ಆಲ್ರೌಂಡರ್ ಜಿಮ್ಮಿ ನಿಶಾಮ್ ಮತ್ತು ವಿಕೆಟ್ ಕೀಪರ್ ವಾಟ್ಲಿಂಗ್ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

3 ಪಂದ್ಯಗಳ ಟೆಸ್ಟ್ ಸರಣಿಯಿಂದ ಅನುಭವಿ ವೇಗಿ ಟಿಮ್ ಸೌಥಿ ಗಾಯಗೊಂಡು ಹೊರಬಿದ್ದಿದ್ದಾರೆ. ಹೀಗಾಗಿ ಸೌಥಿ ಸ್ಥಾನಕ್ಕೆ ಮ್ಯಾಟ್ ಹೆನ್ರಿಗೆ ಅವಕಾಶ ಕಲ್ಪಿಸಲಾಗಿತ್ತು.