ಚಂಡೀಗಡ(ಸೆ.22): ದ್ರೋಣಾಚಾರ್ಯ ಪ್ರಶಸ್ತಿ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಬೇಸರಗೊಂಡಿರುವ ರಾಷ್ಟ್ರೀಯ ಕಾಂಪೌಂಡ್‌ ಆರ್ಚರಿ ಕೋಚ್‌ ಜೀವನ್‌ ಜೋತ್‌ ಸಿಂಗ್‌ ತೇಜಾ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

‘ನಾನು ಆರ್ಚರಿ ತಂಡದ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಪ್ರಶಸ್ತಿ ನೀಡದಿದ್ದರೂ ಪರವಾಗಿಲ್ಲ. ಆದರೆ ಪ್ರಶಸ್ತಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿ. ಕ್ರೀಡಾ ಹಿನ್ನೆಲೆ ಹೊಂದಿರುವ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ಗೆ ಇದು ತಿಳಿದಿರಬೇಕು ಎಂದಿದ್ದಾರೆ. 

2015ರ ವಿಶ್ವ ವಿವಿ ಗೇಮ್ಸ್‌ನಲ್ಲಿ ಸಮಯದ ಗೊಂದಲದಿಂದಾಗಿ ಭಾರತ ಕಂಚಿನ ಪದಕ ತಪ್ಪಿಸಿಕೊಂಡಿತ್ತು. ಈ ಕಾರಣಕ್ಕೆ ಭಾರತ ಆರ್ಚರಿ ಸಂಸ್ಥೆ, ತೇಜಾಗೆ ಒಂದು ವರ್ಷ ನಿಷೇಧ ಹೇರಿತ್ತು. ಬಳಿಕ ತೇಜಾ ನಿರಪರಾಧಿ ಎಂದು ಸಾಬೀತಾಗಿತ್ತು.