ಉಚಿತ ಟಿಕೆಟ್ ವಿಚಾರದ ಜಗಳಕ್ಕೆ ತೆರೆ ಎಳೆಯಲು ಬಿಸಿಸಿಐ ಮುಂದಾಗಿದೆ. ಮಧ್ಯಪ್ರದೇಶ, ತಮಿಳುನಾಡು ಹಾಗೂ ತಮಿಳುನಾಡು ಸೇರಿದಂತೆ ಹಲವು ರಾಜ್ಯ ಸಂಸ್ಥೆಗಳ ಭಾರಿ ವಿರೋಧದಿಂದ ಬಿಸಿಸಿಐ ತನ್ನ ಪಟ್ಟು ಸಡಿಸಿಲಿದೆ.

ನವದೆಹಲಿ(ಅ.07): ಉಚಿತ ಪಾಸ್ ಹಂಚಿಕೆಗೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದಕ್ಕೆ ಬಿಸಿಸಿಐ ಆಡಳಿತ ಮಂಡಳಿ(ಸಿಒಎ) ತನ್ನ ನಿರ್ಧಾರ ಸಡಿಲಿಸಿದ್ದು ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದೆ. ಈ ಮೂಲಕ ರಾಜ್ಯ ಕ್ರಿಕೆಟ್ ಸಂಸ್ಥೆಗಳ ವಾದಕ್ಕೆ ಮಣಿದಿದೆ.

ಶನಿವಾರ ನಡೆದ ಸಭೆಯಲ್ಲಿ ವಿನೋದ್ ರೈ ನೇತೃತ್ವದ ಆಡಳಿತ ಮಂಡಳಿ (ಸಿಒಎ), ತನ್ನ ಪಾಲಿನ 1200 ಟಿಕೆಟ್‌ಗಳಲ್ಲಿ 604 ಟಿಕೆಟ್‌ಗಳನ್ನು ಪಂದ್ಯ ಆಯೋಜಿಸುವ ಸಂಸ್ಥೆಗಳಿಗೆ ಬಿಟ್ಟುಕೊಡಲು ನಿರ್ಧರಿಸಿದೆ. 

ಬಿಸಿಸಿಐನ ನೂತನ ಸಂವಿಧಾನದ ಪ್ರಕಾರ ಪಂದ್ಯದ ಶೇ.90 ರಷ್ಟು ಟಿಕೆಟ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬೇಕು. ಶೇ.10 ರಷ್ಟು ಟಿಕೆಟ್‌ಗಳಲ್ಲಿ 5ರಷ್ಟು ನೀಡಬೇಕಿತ್ತು. ಇದೇ ಕಾರಣಕ್ಕೆ ಇಂದೋರ್‌ನಲ್ಲಿ ಆಯೋಜನೆಯಾಗಿದ್ದ ವೆಸ್ಟ್ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯ ವಿಶಾಖಪಟ್ಟಣಂಗೆ ಸ್ಥಳಾಂತಗೊಂಡಿತ್ತು.