ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಡೇಟಿಂಗ್ ಕುರಿತು ಸ್ಪಷ್ಟ ಚಿತ್ರಣ ಹೊರಬಿದಿದ್ದೆ. ಶಾಸ್ತ್ರಿ ಹಾಗೂ ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆಗಿನ ಡೇಟಿಂಗ್ ಕುರಿತು ಸ್ವತಃ ಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಶಾಸ್ತ್ರಿ ಹೇಳಿದ್ದೇನು?

ಲಂಡನ್(ಸೆ.04): ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹಾಗೂ ಬಾಲಿವುಡ್ ನಟಿ ನಿಮ್ರತ್ ಕೌರ್ ಸದ್ದಿಲ್ಲದೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೋಚ್ ಶಾಸ್ತ್ರಿ ಡೇಟಿಂಗ್‌ನಿಂದ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ನಿಮ್ರತ್ ಕೌರ್ ಜೊತೆಗಿನ ಡೇಟಿಂಗ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಕೋಚ್ ರವಿ ಶಾಸ್ತ್ರಿ ಮೌನ ಮುರಿದಿದ್ದಾರೆ. ನಿಮ್ರತ್ ಕೌರ್ ಜೊತೆಗಿನ ಡೇಟಿಂಗ್ ಶುದ್ಧ ಸುಳ್ಳು. ಇಲ್ಲ ಸಲ್ಲದ ಸುದ್ದಿಗಳನ್ನ ಹರಿಬಿಡಲಾಗುತ್ತಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದಾರೆ.

ರವಿ ಶಾಸ್ತ್ರಿ ಹಾಗೂ ನಿಮ್ರತ್ ಕೌರ್ ಕಳೆದೆರಡು ವರ್ಷಗಳಿಂದ ಸದ್ದಿಲ್ಲದೆ ಡೇಟಿಂಗ್ ನಡೆಸುತ್ತಿದ್ದಾರೆ. ರವಿ ಶಾಸ್ತ್ರಿ ಪತ್ನಿ ರಿತೂ ಸಿಂಗ್ ಜೊತೆಗಿನ ಸಂಬಂಧ ಮುರಿದು ಬಿತ್ತು ಹಲವು ವರ್ಷಗಳೇ ಉರುಳಿದೆ. ಹೀಗಾಗಿ ಇದೀಗ ಶಾಸ್ತ್ರಿ ನಮ್ರತ್ ಕೌರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿತ್ತು.

ಇದನ್ನೂ ಓದಿ: ಬಾಲಿವುಡ್ ನಟಿಯೊಂದಿಗೆ ಕೋಚ್ ರವಿ ಶಾಸ್ತ್ರಿ ಡೇಟಿಂಗ್

ಏರ್‌ಲಿಫ್ಟ್, ಲಂಚ್ ಬಾಕ್ಸ್ ಚಿತ್ರಗಳಲ್ಲಿ ಅದ್ಬುತ ಅಭಿನಯದ ಮೂಲಕ ನಿಮ್ರತ್ ಕೌರ್ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದರು. ಇದೀಗ ಸ್ವತಃ ನಿಮ್ರತ್ ಕೂಡ ಶಾಸ್ತ್ರಿ ಜೊತೆಗಿನ ಡೇಟಿಂಗ್ ಅಲ್ಲಗೆಳೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಿಮ್ರತ್, ಸುಳ್ಳು ಸುದ್ದಿ ಹರತ್ತಿರುವುದು ನೋವಿನ ವಿಚಾರ ಎಂದಿದ್ದಾರೆ.

Scroll to load tweet…

56 ವರ್ಷದ ಶಾಸ್ತ್ರಿ ರಿತು ಸಿಂಗ್ ವಿವಾಹವಾಗಿದ್ದಾರೆ. ಆದರೆ 2013ರಲ್ಲಿ ಇವರು ಪರಸ್ವರ ಬೇರೆ ಬೇರೆಯಾಗಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ. ಹೀಗಾಗಿ ಇದೀಗ ನಿಮ್ರತ್ ಕೌರ್ ಜೊತೆ ಸದ್ದಿಲ್ಲದೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು.