ಭಾರತ ಮಹಿಳಾ ತಂಡವು ವಿಶ್ವಕಪ್ ಟಿ20 ಟೂರ್ನಿಯಲ್ಲಿ ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಕೂಟದಿಂದ ಹೊರಬಿದ್ದಿತ್ತು. ಉತ್ತಮ ಫಾರ್ಮ್’ನಲ್ಲಿದ್ದ ಮಿಥಾಲಿ ರಾಜ್ ಅವರನ್ನು ತಂಡದಿಂದ ಸೆಮಿಫೈನಲ್ ಪಂದ್ಯದಿಂದ ಕೈಬಿಡಲಾಗಿತ್ತು. ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತ ಕೇವಲ 112 ರನ್ ಬಾರಿಸಿ ಆಲೌಟ್ ಆಗಿತ್ತು. ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್ 8 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿತ್ತು. 

ನವದೆಹಲಿ(ನ.26): ಐಸಿಸಿ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಮಿಥಾಲಿ ರಾಜ್‌ರನ್ನು ಹೊರಗಿಟ್ಟಿದ್ದಕ್ಕೆ ಭಾರೀ ವಿವಾದ ಸೃಷ್ಟಿಯಾಗಿದ್ದು, ಇದೀಗ ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮಧ್ಯಸ್ಥಿಕೆ ವಹಿಸಲು ನಿರ್ಧರಿಸಿದೆ. 

ಮಹಿಳಾ ಟಿ20 ವಿಶ್ವಕಪ್: ಮತ್ತೆ ಆಸ್ಟ್ರೇಲಿಯಾ ಚಾಂಪಿಯನ್ಸ್

ಸದ್ಯದಲ್ಲೇ ಈ ಬೆಳವಣಿಗೆ ಕುರಿತು ಆಡಳಿತ ಸಮಿತಿ ನಾಯಕಿ ಹರ್ಮನ್‌ಪ್ರೀತ್‌, ಮಿಥಾಲಿ ರಾಜ್‌, ಕೋಚ್‌ ರಮೇಶ್‌ ಪೊವಾರ್‌, ತಂಡದ ವ್ಯವಸ್ಥಾಪಕಿ ತೃಪ್ತಿ ಭಟ್ಟಾಚಾರ್ಯ ಹಾಗೂ ಆಯ್ಕೆಗಾರ್ತಿ ಸುಧಾ ಶಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಲಿದೆ ಎನ್ನಲಾಗಿದೆ. ಇದೇ ವೇಳೆ, ಆಟಗಾರ್ತಿಯರು ಸಭ್ಯತೆ ಕಾಯ್ದುಕೊಳ್ಳಬೇಕು ಎಂದಿರುವ ಆಡಳಿತ ಸಮಿತಿ, ಆಟಗಾರ್ತಿಯರ ಖಾಸಗಿ ವ್ಯವಸ್ಥಾಪಕರು ತಂಡದ ಕುರಿತು ಹೇಳಿಕೆಗಳನ್ನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಮಹಿಳಾ ಟಿ20 ವಿಶ್ವಕಪ್ ಫೈನಲ್: ನಿರ್ಮಾಣವಾದ ಅಪರೂಪದ ದಾಖಲೆಗಳಿವು

ಭಾರತ ಮಹಿಳಾ ತಂಡವು ವಿಶ್ವಕಪ್ ಟಿ20 ಟೂರ್ನಿಯಲ್ಲಿ ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಕೂಟದಿಂದ ಹೊರಬಿದ್ದಿತ್ತು. ಉತ್ತಮ ಫಾರ್ಮ್’ನಲ್ಲಿದ್ದ ಮಿಥಾಲಿ ರಾಜ್ ಅವರನ್ನು ತಂಡದಿಂದ ಸೆಮಿಫೈನಲ್ ಪಂದ್ಯದಿಂದ ಕೈಬಿಡಲಾಗಿತ್ತು. ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತ ಕೇವಲ 112 ರನ್ ಬಾರಿಸಿ ಆಲೌಟ್ ಆಗಿತ್ತು. ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್ 8 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿತ್ತು.

ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾಗೆ ಆಘಾತ!

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮಣಿಸಿ ಆಸ್ಟ್ರೇಲಿಯಾ ದಾಖಲೆಯ 4ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.