ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 19.4 ಓವರ್’ಗಳಲ್ಲಿ ಕೇವಲ 105 ರನ್ ಬಾರಿಸಿ ಆಲೌಟ್ ಆಯಿತು. ಇಂಗ್ಲೆಂಡ್ ವನಿತೆಯರ ಸಂಘಟಿತ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಸವಾಲಿನ ಮೊತ್ತ ಕಲೆಹಾಕಲು ವಿಫಲವಾಯಿತು.
ಆ್ಯಂಟಿಗುವಾ[ನ.25]: ಇಂಗ್ಲೆಂಡ್ ತಂಡವನ್ನು 8 ವಿಕೆಟ್’ಗಳ ಅಂತರದಲ್ಲಿ ಅನಾಯಾಸವಾಗಿ ಮಣಿಸಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯ 4ನೇ ಬಾರಿಗೆ ವಿಶ್ವಕಪ್ ಜಯಿಸಿ ಸಂಭ್ರಮಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 19.4 ಓವರ್’ಗಳಲ್ಲಿ ಕೇವಲ 105 ರನ್ ಬಾರಿಸಿ ಆಲೌಟ್ ಆಯಿತು. ಇಂಗ್ಲೆಂಡ್ ವನಿತೆಯರ ಸಂಘಟಿತ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಸವಾಲಿನ ಮೊತ್ತ ಕಲೆಹಾಕಲು ವಿಫಲವಾಯಿತು. ಆರಂಭಿಕ ಬ್ಯಾಟ್ಸ್’ವುಮೆನ್ ಡೇನಿಯಲ್ ವ್ಯಾಟ್[43] ಹಾಗೂ ನಾಯಕಿ ಹೀಥರ್ ನೈಟ್ ಹೊರತುಪಡಿಸಿ ಉಳಿದ್ಯಾವ ಆಟಗಾರ್ತಿಯರೂ ಎರಡಂಕಿ ಮೊತ್ತ ದಾಖಲಿಸಲು ಸಪಲವಾಗಲಿಲ್ಲ. ಆಸೀಸ್ ಪರ ಗಾರ್ಡ್ನರ್ 3, ಮೆಗಾನ್ ಶ್ಕುಟ್, ಜಾರ್ಜಿಯಾ ವಾರೆಹ್ಯಾಂ ತಲಾ 2 ಮತ್ತು ಎಲಿಸಾ ಪೆರ್ರಿ 1 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು ಇಂಗ್ಲೆಂಡ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 15.1 ಓವರ್’ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಗಾರ್ಡ್ನರ್ ಅಜೇಯ 33 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಫೈನಲ್’ನಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ ಗಾರ್ಡ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದ ಅಲಿಸಾ ಹೀಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 105/10
ಡೇನಿಯಲ್ ವ್ಯಾಟ್: 43
ಗಾರ್ಡ್ನರ್: 22/3
ಆಸ್ಟ್ರೇಲಿಯಾ: 106/2
ಗಾರ್ಡ್ನರ್: 33*
ಸೋಫಿ ಎಕ್ಲಿಸ್ಟೋನ್: 12/1
