ನಮೀಬಿಯಾ ಹಾಗೂ ಒಮನ್ ನಡುವಿನ ವಿಶ್ವ ಕ್ರಿಕೆಟ್ ಲೀಗ್ ಡಿವಿಜನ್-2 ಫೈನಲ್ ಪಂದ್ಯದಲ್ಲಿ ಕ್ಲೈರ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದರು. ಈ ಸಾಧನೆ ಮಾಡಿದ ಮೊದಲ ಮಹಿಳಾ ಅಂಪೈರ್ ಎಂಬ ಖ್ಯಾತಿಗೆ ಕ್ಲೈರ್ ಪಾತ್ರರಾಗಿದ್ದಾರೆ.
ದುಬೈ(ಏ.28): ಪುರುಷರ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಣೆ ಮಾಡುವ ಮೂಲಕ ಆಸ್ಟ್ರೇಲಿಯಾದ ಕ್ಲೈರ್ ಪೊಲೊಸಾಕ್ ನೂತನ ಇತಿಹಾಸ ನಿರ್ಮಿಸಿದ್ದಾರೆ.
ಈ ಸಾಧನೆ ಮಾಡಿದ ಮೊದಲ ಮಹಿಳಾ ಅಂಪೈರ್ ಎಂಬ ಖ್ಯಾತಿಗೆ ಕ್ಲೈರ್ ಪಾತ್ರರಾಗಿದ್ದಾರೆ. ನಮೀಬಿಯಾ ಹಾಗೂ ಒಮನ್ ನಡುವಿನ ವಿಶ್ವ ಕ್ರಿಕೆಟ್ ಲೀಗ್ ಡಿವಿಜನ್-2 ಫೈನಲ್ ಪಂದ್ಯದಲ್ಲಿ ಕ್ಲೈರ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದರು.
ಏಕದಿನ ವಿಶ್ವಕಪ್: ಕೊಹ್ಲಿಗೆ ಶುಭ ಕೋರಿದ ಖನ್ನಾ
ನವದೆಹಲಿ: ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಶನಿವಾರ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದು, ಮುಂಬರುವ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಶುಭ ಕೋರಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಶನಿವಾರ ನಡೆದ ಸಿಒಎ ಸಭೆಗೆ ಗೈರಾಗಿದ್ದ ಖನ್ನಾ, ಆರ್‌ಸಿಬಿ ತಂಡ ಉಳಿದುಕೊಂಡಿದ್ದ ಹೋಟೆಲ್‌ಗೆ ತೆರಳಿ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದಾರೆ. ‘ಒಳ್ಳೆಯದಾಗಲಿ ಎಂದು ಕೊಹ್ಲಿಗೆ ಶುಭ ಕೋರಿದೆ. ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡವು ವಿಶ್ವಕಪ್ ಜಯಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಖನ್ನಾ ತಿಳಿಸಿದರು.
