ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯಕ್ಕೆ ತಯಾರಿ ನಡೆಸುತಿದ್ದ ಯಜುವೇಂದ್ರ ಚೆಹಾಲ್‌ರನ್ನ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕಾಲೆಳೆದಿದ್ದಾರೆ. ಚಹಾಲ್ ವೀಡಿಯೋಗೆ ಗೇಲ್ ಮಾಡಿದ ಕಮೆಂಟ್ ಏನು? ಇಲ್ಲಿದೆ ಹೆಚ್ಚಿನ ವಿವರ. 

ಬ್ರಿಸ್ಬೇನ್(ನ.21): ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಅಂತಿಮ ಕಸರತ್ತು ನಡೆಸುತ್ತಿದೆ. ಟೀಂ ಇಂಡಿಯಾ 12ರ ಬಳಗದಲ್ಲಿ ಕಾಣಿಸಿಕೊಂಡಿರುವ ಯಜುವೇಂದ್ರ ಚೆಹಾಲ್‌ರನ್ನ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕಾಲೆಳೆದಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟ್ ಆಪ್‌ಲೋಡ್ ಮಾಡಿದ್ದ ಯಜುವೇಂದ್ರ ಚೆಹಾಲ್‌ಗೆ ಕ್ರಿಸ್ ಗೇಲ್ ಪ್ರತಿಕ್ರಿಯಿಸಿದ್ದಾರೆ. ಆಸಿಸ್ ವಿರುದ್ಧದ ಸರಣಿಗೆ ಸಮರಾಭ್ಯಸ ಎಂದು ಚೆಹಾಲ್ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಅಪ್‌ಲೋಡ್ ಮಾಡಿದ್ದಾರೆ.

View post on Instagram

ಯಜುವೇಂದ್ರ ಚಹಾಲ್ ವೀಡಿಯೋ ನೋಡಿದ ಕ್ರಿಸ್ ಗೇಲ್, ದೇವರೆ ಕಾಪಾಡು ಎಂದು ಪ್ರತಿಕ್ರಿಸಿದ್ದಾರೆ. ಇದೀಗ ಚೆಹಾಲ್ ವರ್ಕೌಟ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.