ಬಿಗ್ ಬ್ಯಾಶ್ ಟೂರ್ನಿಯಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಸಿಡ್ನಿ ಥಂಡರ್ಸ್ ತಂಡವನ್ನು ಪ್ರತಿನಿಧಿಸಿರುವ ಗೇಲ್, ವೇತನ ಬಿಕ್ಕಟಿನ ಬಗ್ಗೆ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮುಂತಾದ ಹಿರಿಯ ಆಟಗಾರರಾದ ಆಸೀಸ್ ಕ್ರಿಕೆಟ್ ಮಂಡಳಿಯ ಒತ್ತಡಕ್ಕೆ ಮಣಿಯಬಾರದು ಎಂದು ಗೇಲ್ ಕಿವಿಮಾತು ಹೇಳಿದ್ದಾರೆ.
ನವದೆಹಲಿ(ಜು.17): ನೂತನ ಒಪ್ಪಂದಕ್ಕೆ ಸಹಿ ಹಾಕದ ಕಾರಣ ಸದ್ಯ ನಿರುದ್ಯೋಗಿಗಳಾಗಿರುವ ಆಸ್ಟ್ರೇಲಿಯಾ ಆಟಗಾರರಿಗೆ ವೆಸ್ಟ್ ಇಂಡಿಸ್ ಕ್ರಿಕೆಟಿಗ ಕ್ರಿಸ್ ಗೇಲ್ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೇಲ್, ‘ಪ್ರಾಮಾಣಿಕವಾಗಿ ಹೇಳುತ್ತೇನೆ ಪ್ರಕರಣ ಕುರಿತು ನನಗೆ ಸಂಪೂರ್ಣ ಮಾಹಿತಿಯೂ ಇಲ್ಲ, ಈ ಕುರಿತು ಯಾರೊಂದಿಗೂ ನಾನು ಮಾತನಾಡಿಲ್ಲ. ಆದರೆ, ಪರಿಸ್ಥಿತಿಯ ಬಗ್ಗೆ ನನಗೆ ಅರಿವಿದೆ. ನಾನು ಸಹ ಈ ರೀತಿಯ ಸಮಸ್ಯೆಯನ್ನು ಎದುರಿಸಿದ್ದೆ. ಆಸ್ಟ್ರೇಲಿಯಾ ಆಟಗಾರರೊಂದಿಗೆ ಹೋರಾಟಕ್ಕೆ ನನ್ನ ಬೆಂಬಲವಿದೆ' ಎಂದಿದ್ದಾರೆ.
ಬಿಗ್ ಬ್ಯಾಶ್ ಟೂರ್ನಿಯಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಸಿಡ್ನಿ ಥಂಡರ್ಸ್ ತಂಡವನ್ನು ಪ್ರತಿನಿಧಿಸಿರುವ ಗೇಲ್, ವೇತನ ಬಿಕ್ಕಟಿನ ಬಗ್ಗೆ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮುಂತಾದ ಹಿರಿಯ ಆಟಗಾರರಾದ ಆಸೀಸ್ ಕ್ರಿಕೆಟ್ ಮಂಡಳಿಯ ಒತ್ತಡಕ್ಕೆ ಮಣಿಯಬಾರದು ಎಂದು ಗೇಲ್ ಕಿವಿಮಾತು ಹೇಳಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಆಟಗಾರರ ನಡುವೆ ಉಂಟಾಗಿರುವ ವೇತನ ಬಿಕ್ಕಟ್ಟಿನಿಂದ ಸದ್ಯ ಆಸ್ಟ್ರೇಲಿಯಾದ ಸುಮಾರು 230ಕ್ಕೂ ಹೆಚ್ಚು ಕ್ರಿಕೆಟ್ ಆಟಗಾರರು ನಿರುದ್ಯೋಗಿಗಳಾಗಿದ್ದಾರೆ.
ಇತ್ತೀಚೆಗಷ್ಟೇ ಭಾರತದ ವಿರುದ್ಧದ ಟಿ20 ಪಂದ್ಯದಲ್ಲಿ ವಿಂಡೀಸ್ ಪರ ಆಡುವ ಮೂಲಕ ಗೇಲ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ವೆಸ್ಟ್ ಇಂಡಿಸ್'ಗೆ 2019ರ ಏಕದಿನ ವಿಶ್ವಕಪ್ ಗೆದ್ದುಕೊಡಬೇಕೆಂಬ ಆಸೆಯಿದೆ ಎಂದು ಗೇಲ್ ತಿಳಿಸಿದ್ದಾರೆ.