Asianet Suvarna News Asianet Suvarna News

IPL 2019 ಕ್ರಿಕೆಟ್‌ನಲ್ಲಿ 300 ಸಿಕ್ಸರ್ ಸಿಡಿಸಿ ಕ್ರಿಸ್ ಗೇಲ್ ದಾಖಲೆ!

ಐಪಿಎಲ್ ಟೂರ್ನಿಯಲ್ಲಿ ಗೇಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬರೋಬ್ಬರಿ 300 ಸಿಕ್ಸರ್ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ. ಗೇಲ್ ದಾಖಲೆ ಮುರಿಯುವುದು ಅಸಾಧ್ಯವಾಗಿದೆ. ಯಾಕೆ? ಇಲ್ಲಿದೆ ವಿವರ.
 

Chris Gayle is First ever batsman to reach 300 six in IPL cricket
Author
Bengaluru, First Published Mar 30, 2019, 7:16 PM IST

ಮೊಹಾಲಿ(ಮಾ.30): ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೊಹಾಲಿ ಯಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಬರೋಬ್ಬರಿ 300 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಈ ಬ್ಯಾಟ್ಸ್‌ಮನ್ ಐಪಿಎಲ್ ಟೂರ್ನಿಯಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ CSKಗೆ ಶಾಕ್!

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಗೇಲ್ ಮೊದಲ ಸ್ಥಾನ ಅಲಂಕರಿಸಿದ್ದಾರೆ. ವಿಶೇಷ ಅಂದರೆ 2 ಹಾಗೂ 3ನೇ ಸ್ಥಾನದಲ್ಲಿರುವ ಬ್ಯಾಟ್ಸ್‌ಮನ್‌ಗಳು 200 ಸಿಕ್ಸರ್ ಗಡಿ ಕೂಡ ದಾಟಿಲ್ಲ. 2ನೇ ಸ್ಥಾನದಲ್ಲಿರುವ ಎಬಿ ಡಿವಿಲಿರ್ಸ್ 192 ಸಿಕ್ಸರ್ ಸಿಡಿಸಿದ್ದರೆ, ಎಂ.ಎಸ್.ಧೋನಿ 187  ಸಿಕ್ಸರ್ ಬಾರಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಿಕೊಂಡ್ರಾ ಕ್ರಿಸ್ ಗೇಲ್?

ಗೇಲ್ ಆರಂಭಿಕ 100 ಸಿಕ್ಸರ್‌ಗಳನ್ನು 37 ಇನ್ನಿಂಗ್ಸ್‌ಗಳಲ್ಲಿ ಪೂರೈಸಿದ್ದಾರೆ. ಇನ್ನು 200 ಸಿಕ್ಸರ್ 69 ಇನ್ನಿಂಗ್ಸ್‌ ಹಾಗೂ 114 ಇನ್ನಿಂಗ್ಸ್‌ಗಳಲ್ಲಿ 300 ಸಿಕ್ಸರ್ ಪೂರೈಸಿದ್ದಾರೆ.  ಸಿಕ್ಸರ್‌ನಿಂದಲೇ ಗೇಲ್ 1800 ರನ್ ಸಿಡಿಸಿದ್ದಾರೆ. 

Follow Us:
Download App:
  • android
  • ios