ನಿಮಗೆ ಇಷ್ಟವಾದ ಸ್ಟೇಡಿಯಂ ಯಾವುದು ಎಂಬ ಪ್ರಶ್ನೆಗೆ ಸಬೀನಾ ಪಾರ್ಕ್ ಮೈದಾನ ಎಂದಿರುವ ಗೇಲ್, ವೆಸ್ಟ್ ಇಂಡಿಸ್'ಗಿಂತ ಭಾರತದಲ್ಲಿ ಅಭಿಮಾನಿಗಳು ನನ್ನನ್ನು ಹೆಚ್ಚು ಇಷ್ಟಪಡುತ್ತಾರೆಂದಿದ್ದಾರೆ.

ಬೆಂಗಳೂರು(ಜು.16): ಭಾರತದ ಮಾಜಿ ಕ್ರಿಕೆಟಿಗ, ಸ್ಫೋಟಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಬೇಕು ಎನ್ನುವುದು ನನ್ನ ಕನಸು ಎಂದು ವೆಸ್ಟ್‌'ಇಂಡೀಸ್‌'ನ ದೈತ್ಯ ಕ್ರಿಕೆಟಿಗ ಕ್ರಿಸ್ ಗೇಲ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ತಮ್ಮ ಕನಸಿನ ತಂಡದ ಕುರಿತು ಮಾತನಾಡಿರುವ ಕ್ರಿಸ್‌ಗೇಲ್, ‘ನನ್ನ ಕನಸಿನ ತಂಡಕ್ಕೆ ನಾನೇ ನಾಯಕ. ಡ್ಯಾಷಿಂಗ್ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಬೇಕೆಂಬುದು ನನ್ನ ಕನಸು’ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ಕನಸಿನ ತಂಡದಲ್ಲಿರುವ ಇತರೆ ಆಟಗಾರರ ವಿವರವನ್ನು ಗೇಲ್ ಬಿಟ್ಟುಕೊಟ್ಟಿಲ್ಲ.

ನಿಮಗೆ ಇಷ್ಟವಾದ ಸ್ಟೇಡಿಯಂ ಯಾವುದು ಎಂಬ ಪ್ರಶ್ನೆಗೆ ಸಬೀನಾ ಪಾರ್ಕ್ ಮೈದಾನ ಎಂದಿರುವ ಗೇಲ್, ವೆಸ್ಟ್ ಇಂಡಿಸ್'ಗಿಂತ ಭಾರತದಲ್ಲಿ ಅಭಿಮಾನಿಗಳು ನನ್ನನ್ನು ಹೆಚ್ಚು ಇಷ್ಟಪಡುತ್ತಾರೆಂದಿದ್ದಾರೆ.