(Video) ಟಿ20ಯಲ್ಲಿ 100 ಸಿಕ್ಸರ್ ಸಿಡಿಸಿ ಗೇಲ್ ದಾಖಲೆ
ಲಂಡನ್(ಸೆ.17): ವೆಸ್ಟ್ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್‌ಗೇಲ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100ನೇ ಸಿಕ್ಸರ್ ಸಿಡಿಸಿದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಡರ್ಹಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟಿ20 ಪಂದ್ಯದ 2ನೇ ಓವರ್‌ನ 3ನೇ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಗೇಲ್ ಈ ದಾಖಲೆ ಬರೆದರು. 71 ಪಂದ್ಯಗಳಿಂದ 91 ಸಿಕ್ಸರ್ ಸಿಡಿಸಿರುವ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಾಲಂ 2ನೇ ಸ್ಥಾನದಲ್ಲಿದ್ದಾರೆ.
Scroll to load tweet…
