ಮೊದಲ ಸೆಟ್'ನಲ್ಲಿ(11-21) ಹಿನ್ನಡೆ ಅನುಭವಿದರೂ ಪಟ್ಟು ಬಿಡದ ಸಿಂಧು, ತೀವ್ರ ಜಿದ್ದಾಜಿದ್ದಿನಿಂದ ಉಳಿದೆರಡು ಸೆಟ್'ಗಳನ್ನು(23-21, 23-21) ತಮ್ಮದಾಗಿಸಿಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ನವದೆಹಲಿ(ನ.19): ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಚೀನಾ ಓಪನ್'ನಲ್ಲಿ ಕೆಚ್ಚೆದೆಯ ಹೋರಾಟ ನಡೆಸುವ ಮೂಲಕ ಈ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಫೈನಲ್ ತಲುಪಿ ಇತಿಹಾ ದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ 21 ವರ್ಷದ ಸಿಂಧು ಉತ್ತರ ಕೋರಿಯಾದ ಆರನೇ ಶ್ರೇಯಾಂಕಿತ ಆಟಗಾರ್ತಿ ಸಂಗ್ ಜೀ ಹ್ಯುನ್ ಎದುರು 11-21, 23-21, ಹಾಗೂ 21-19 ಸೆಟ್'ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಿದ್ದಾರೆ.

ಒಟ್ಟು 1.24 ತಾಸುಗಳ ಕಾಲ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಸೆಟ್'ನಲ್ಲಿ(11-21) ಹಿನ್ನಡೆ ಅನುಭವಿದರೂ ಪಟ್ಟು ಬಿಡದ ಸಿಂಧು, ತೀವ್ರ ಜಿದ್ದಾಜಿದ್ದಿನಿಂದ ಉಳಿದೆರಡು ಸೆಟ್'ಗಳನ್ನು(23-21, 23-21) ತಮ್ಮದಾಗಿಸಿಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಏಳನೇ ಶ್ರೇಯಾಂಕಿತ ಚೀನಾದ ಆಟಗಾರ್ತಿ ಸುನ್ ಯೂ ಅವರನ್ನು ಎದುರಿಸಲಿದ್ದಾರೆ.

ಒಲಿಂಪಿಕ್ ಪದಕ ವಿಜೇತೆ ಸಿಂಧು, ಈ ಹಿಂದೆ 2013ರ ಇಂಡಿಯನ್ ಓಪನ್ ಹಾಗೂ 2012ರ ಏಶಿಯಾನ್ ಯೂತ್ ಚಾಂಪಿಯನ್'ಷಿಪ್'ನಲ್ಲಿ ಸುನ್ ಯೂ ಅವರನ್ನು ಮಣಿಸಿದ್ದಾರೆ.