ಚಾಂಗ್‌ಝೋ[ಸೆ.20]: ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ವಿಶ್ವ ಚಾಂಪಿ​ಯನ್‌, ಭಾರ​ತದ ಪಿ.ವಿ.ಸಿಂಧು ಹೊರ​ಬಿ​ದ್ದಿ​ದ್ದಾ​ರೆ. ಗುರು​ವಾರ ನಡೆದ ಮಹಿಳಾ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು, ಥಾಯ್ಲೆಂಡ್‌ನ ಪೋರ್ನ್‌ಪವಿ ಚೊಚು​ವಾಂಗ್‌ ವಿರುದ್ಧ 21-12, 13-21, 19-21 ಗೇಮ್‌ಗಳಲ್ಲಿ ಸೋಲುಂಡು ಆಘಾತ ಅನು​ಭ​ವಿ​ಸಿ​ದರು.

ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಮುನ್ನಡೆ, ಸೈನಾ ಔಟ್‌

ಇದೇ ವೇಳೆ ಪುರು​ಷರ ಸಿಂಗಲ್ಸ್‌ನಲ್ಲಿ ಬಿ.ಸಾಯಿ ಪ್ರಣೀತ್‌ ಕ್ವಾರ್ಟರ್‌ ಫೈನಲ್‌ಗೇರಿ​ದ್ದಾರೆ. 2ನೇ ಸುತ್ತಿನ ಪಂದ್ಯ​ದಲ್ಲಿ ಚೀನಾದ ಗುವಾಂಗ್ಜು ಲು ವಿರುದ್ಧ 21-19, 21-19 ಗೇಮ್‌ಗಳಲ್ಲಿ ಪ್ರಣೀತ್‌ ಗೆಲುವು ಸಾಧಿ​ಸಿ​ದರು. ಮತ್ತೊಂದು ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯ​ದಲ್ಲಿ ಪಾರು​ಪಳ್ಳಿ ಕಶ್ಯಪ್‌, ಇಂಡೋ​ನೇ​ಷ್ಯಾದ ಆಂಥ್ಯೋನಿ ಜಿಂಟಿಂಗ್‌ ವಿರುದ್ಧ 21-23, 21-15, 12-21 ಗೇಮ್‌ಗಳಲ್ಲಿ ಪರ​ಭಾವಗೊಂಡು ಹೊರ​ಬಿ​ದ್ದರು.

ದಸರಾ ಕ್ರೀಡಾಕೂಟ ಉದ್ಘಾಟಿಸಲಿರುವ ಪಿ.ವಿ.ಸಿಂಧು

ಡಬ​ಲ್ಸ್‌ನಲ್ಲೂ ಹಿನ್ನಡೆ: ಪುರುಷರ ಡಬಲ್ಸ್‌ನ 2ನೇ ಸುತ್ತಿ​ನ​ಲ್ಲಿ ಸಾತ್ವಿಕ್‌ ಹಾಗೂ ಚಿರಾಗ್‌ ಶೆಟ್ಟಿ, ಜಪಾನ್‌ನ ತಕೆಶಿ ಕಮುರ ಹಾಗೂ ಕೀಗೊ ಸೊನೊಡ ವಿರುದ್ಧ 19-21, 8-21ರಿಂದ ಸೋತು ಹೊರಬಿದ್ದರು. ಮಿಶ್ರ ಡಬಲ್ಸ್‌ನ 2ನೇ ಸುತ್ತಿ​ನ​ಲ್ಲಿ ಸಾತ್ವಿಕ್‌ ಹಾಗೂ ಅಶ್ವಿನಿ ಜೋಡಿ ಜಪಾನ್‌ನ ಯುಕಿ ಕನೆಕೊ ಹಾಗೂ ಮಿಸಾಕಿ ಮಟ್ಸುಟೊಮೊ ವಿರುದ್ಧ 11-21, 21-16, 12-21 ಗೇಮ್‌ಗಳಲ್ಲಿ ಸೋಲುಂಡಿತು.