ಚೀನಾದ 28 ರನ್ ಸ್ಕೋರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದ ಹೊಸ ದಾಖಲೆಯಾಗಿದೆ. 2004ರಲ್ಲಿ ಶ್ರೀಲಂಕಾ ವಿರುದ್ಧ ಜಿಂಬಾಬ್ವೆ 35 ರನ್'ಗೆ ಆಲೌಟ್ ಆಗಿದ್ದು ಈವರೆಗೆ ದಾಖಲೆಯಾಗಿ ಉಳಿದಿದೆ.

ಥಾಯ್ಲೆಂಡ್: ಭವಿಷ್ಯದಲ್ಲಿ ವಿಶ್ವ ಕ್ರಿಕೆಟ್'ನಲ್ಲಿ ದಾಖಲೆಗಳ ಮೇಲೆ ದಾಖಲೆ ಸ್ಥಾಪಿಸುತ್ತೇನೆಂದು ಕೊಚ್ಚಿಕೊಳ್ಳುತ್ತಿದ್ದ ಚೀನಾದ ತಂಡ ವಿಶ್ವ ಕ್ರಿಕೆಟ್'ನ ಇತಿಹಾಸದಲ್ಲೇ ಅತ್ಯಂತ ಹೀನ ಸೋಲನುಭವಿಸಿದೆ. ಸೌದಿ ಅರೇಬಿಯಾ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಚೀನಾ ಕೇವಲ 28 ರನ್'ಗೆ ಆಲೌಟ್ ಆಗಿದೆ. ಗೆಲ್ಲಲು 419 ರನ್ ಗುರಿ ಬೆನ್ನತ್ತಿದ ಚೀನಾದ ಬ್ಯಾಟುಗಾರರು ತರಗೆಲೆಗಳಂತೆ ಉದುರಿ 390 ರನ್'ಗಳಿಂದ ಸೋಲಿನ ಮುಖಭಂಗವಾಗಿದೆ.

ಥಾಯ್ಲೆಂಡ್'ನ ಚಿಯಾಂಗ್ ಮಾಯ್ ನಗರದಲ್ಲಿ ನಡೆದ ಚೀನಾ ವರ್ಸಸ್ ಸೌದಿ ಅರೇಬಿಯಾ ಪಂದ್ಯವು ವರ್ಲ್ಡ್ ಕ್ರಿಕೆಟ್ ಲೀಗ್'ನ ಮೊದಲ ಡಿವಿಷನ್ ಕ್ವಾಲಿಫಯರ್ ಆಗಿದೆ. ಈ ಪಂದ್ಯದಲ್ಲಿ ಚೀನಾದ ಸ್ಕೋರ್ ಕಾರ್ಡ್'ನಲ್ಲಿ ಎಕ್ಸ್'ಟ್ರಾಗಳದ್ದೇ ಗರಿಷ್ಠ ಸ್ಕೋರಾಗಿದೆ. 13 ರನ್ ಎಕ್ಸ್'ಟ್ರಾದಿಂದಲೇ ಬಂದಿದೆ. ಇನ್ಯಾವುದೇ ಆಟಗಾರನೂ ಈ ಮೊತ್ತದ ಗಡಿ ದಾಟಲು ಸಾಧ್ಯವಾಗಲಿಲ್ಲ.

Scroll to load tweet…

ಚೀನಾದ 28 ರನ್ ಸ್ಕೋರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದ ಹೊಸ ದಾಖಲೆಯಾಗಿದೆ. 2004ರಲ್ಲಿ ಶ್ರೀಲಂಕಾ ವಿರುದ್ಧ ಜಿಂಬಾಬ್ವೆ 35 ರನ್'ಗೆ ಆಲೌಟ್ ಆಗಿದ್ದು ಈವರೆಗೆ ದಾಖಲೆಯಾಗಿ ಉಳಿದಿದೆ. 2007ರಲ್ಲಿ ಕೆರಿಬಿಯನ್ ನಾಡಿನಲ್ಲಿ ಬರ್ಬಡೋಸ್ ರಾಜ್ಯ ತಂಡದ ವಿರುದ್ಧದ 50 ಓವರ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅಂಡರ್-19 ತಂಡ 18 ರನ್'ಗೆ ಆಲೌಟ್ ಆಗಿತ್ತು. ಅದು 50 ಓವರ್ ಪಂದ್ಯವಾದರೂ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಚೀನಾ 28 ರನ್'ಗೆ ಆಲೌಟ್ ಆಗಿದ್ದು ಅಧಿಕೃತವಾಗಿ ಹೊಸ ದಾಖಲೆಯ ಪುಟಕ್ಕೆ ಸೇರ್ಪಡೆಗೊಳ್ಳಲಿದೆ.