ಪ್ರಸ್ತುತ ಪೂಜಾರ ಇಂಗ್ಲೆಂಡ್'ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದು, ನಾಟಿಂಗ್'ಹ್ಯಾಮ್'ಶೇರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ನವದೆಹಲಿ(ಜೂ.06): ರಾಹುಲ್‌ ದ್ರಾವಿಡ್‌ ಜತೆ ಡ್ರೆಸ್ಸಿಂಗ್‌ ಕೊಠಡಿ ಹಂಚಿಕೊಂಡಿದ್ದು ನನ್ನ ಸೌಭಾಗ್ಯ ಎಂದಿರುವ ಭಾರತ ಟೆಸ್ಟ್‌ ತಂಡದ ಆಟಗಾರ ಚೇತೇಶ್ವರ್‌ ಪೂಜಾರ, ಮಾಜಿ ನಾಯಕ ತಮ್ಮ ನೆಚ್ಚಿನ ಸಹ ಆಟಗಾರ ಎಂದಿದ್ದಾರೆ.

‘ದ್ರಾವಿಡ್‌ ಆಟ ನನಗೆ ಸ್ಫೂರ್ತಿ ತುಂಬಿದೆ. ಅವರ ಜತೆ ಆಡುತ್ತಾ ನಿಧಾನವಾಗಿ ನನ್ನ ಆಟವೂ ಅವರಂತೆಯೇ ಆಯಿತು. ಮೈದಾನದಲ್ಲಿ ಹಾಗೂ ಮೈದಾನದಾಚೆ ಅವರನ್ನು ನೋಡಿ ಹಲವು ವಿಚಾರಗಳನ್ನು ಕಲಿತುಕೊಂಡಿದ್ದೇನೆ' ಎಂದು ಪೂಜಾರ ಹೇಳಿದ್ದಾರೆ. ನನ್ನ ಮುಂದೆ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಮೂವರು ಮಾದರಿ ಕ್ರಿಕೆಟಿಗರಿದ್ದರೂ, ದ್ರಾವಿಡ್ ನನಗೆ ಸದಾ ಸ್ಪೂರ್ತಿಯನ್ನು ನೀಡುತ್ತಿದ್ದರು ಎಂದು ಪೂಜಾರ ಅಭಿಪ್ರಾಯಪಟ್ಟಿದ್ದಾರೆ

ಪ್ರಸ್ತುತ ಪೂಜಾರ ಇಂಗ್ಲೆಂಡ್'ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದು, ನಾಟಿಂಗ್'ಹ್ಯಾಮ್'ಶೇರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪೂಜಾರ ಟೀಂ ಇಂಡಿಯಾದ ಟೆಸ್ಟ್ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಸೌರಾಷ್ಟ್ರದ ಆಟಗಾರ ಜುಲೈನಲ್ಲಿ ನಡೆಯಲಿರುವ ಶ್ರೀಲಂಕಾದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.