ಕೊಹ್ಲಿ, ಧವನ್ ಅವರಿಗಿಂತ ಪೂಜಾರ ಸ್ಥಿರ ಪ್ರದರ್ಶನ ನೀಡುತ್ತಾರೆ’ ಎಂದು ಗಂಭೀರ್ ಹೇಳಿದ್ದಾರೆ.

ಮುಂಬೈ(ಆ.09): ಭಾರತ ಟೆಸ್ಟ್ ತಂಡದ ಆಟಗಾರ ಚೇತೇಶ್ವರ ಪೂಜಾರ ಟೆಸ್ಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರಿಗಿಂತ ಪ್ರಭಾವಿ ಬ್ಯಾಟ್ಸ್‌ಮನ್ ಎಂದು ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

‘ಏಕದಿನ ಹಾಗೂ ಟಿ20 ಮಾದರಿಗೆ ನೀಡಿದಷ್ಟು ಮಹತ್ವವನ್ನು ನಾವು ಟೆಸ್ಟ್‌'ಗೆ ನೀಡುವುದಿಲ್ಲ. ಆದರೆ, ಪೂಜಾರ ಹಾಗಲ್ಲ. ಟೆಸ್ಟ್ ಕ್ರಿಕೆಟ್‌'ನಲ್ಲಿ ಅವರು ಅಗ್ರಗಣ್ಯ ಆಟಗಾರ ಎನಿಸಿದ್ದಾರೆ. ಇದೇ ಕಾರಣದಿಂದ ಕೊಹ್ಲಿ, ಧವನ್ ಅವರಿಗಿಂತ ಪೂಜಾರ ಸ್ಥಿರ ಪ್ರದರ್ಶನ ನೀಡುತ್ತಾರೆ’ ಎಂದು ಗಂಭೀರ್ ಹೇಳಿದ್ದಾರೆ.

‘ಪೂಜಾರ ಹೆಚ್ಚಾಗಿ ಒಂದು ಮಾದರಿಯಲ್ಲಿ ಆಡುತ್ತಿದ್ದಾರೆ, ಇದು ಗಮನಾರ್ಹ ಅಂಶ. ಹೀಗೆ ಒಂದು ಮಾದರಿಯಲ್ಲಿ ಆಡುವುದರಿಂದ ಮನಸ್ಸು ಬಹಳ ಸ್ಥಿರವಾಗಿರುತ್ತದೆ. ಏಕದಿನ ಹಾಗೂ ಟಿ20ಯಲ್ಲಿ ಪೂಜಾರ ಆಡಬಹುದು. ಆದರೆ. ಅದು ಅವರಿಗೆ ಕೊಂಚ ಕಷ್ಟವಾಗಬಹುದು’ ಎಂದಿದ್ದಾರೆ.