ಅತ್ಯಾಧುನಿಕ ಮೆಶಿನರಿ, ಹೆಲಿಕಾಪ್ಟರ್ ಏನೆಲ್ಲ ಬಳಸಿದರೂ ಒದ್ದೆ ಕಡಿಮೆಯಾಗದಾಗ ಪಿಚ್ ಮೇಲೆ ಬೆಂಕಿ ಹಚ್ಚಿ ಬಿಸಿ ಶಾಖ ನೀಡಿ ಪಿಚ್ ರೆಡಿ ಮಾಡಿದ್ಧಾರೆ. ಭಾರತ ವೆಸ್ಟ್ ಇಂಡೀಸ್ ಸೇರಿದಂತೆ ಕೆಲ ರಾಷ್ಟ್ರಗಳಲ್ಲಷ್ಟೇ ಇಂತಹ ತಾಂತ್ರಿಕತೆಯನ್ನ ಬಳಸಲಾಗುತ್ತೆ.

ಚೆನ್ನೈ(ಡಿ.16): ಕೆಲ ದಿನಗಳ ಹಿಮದಷ್ಟೇ ವಾರ್ಧಾ ಚಂಡಮಾರುತ ಚೆನ್ನೈ ನಗರಕ್ಕೆ ಅಪ್ಪಳಿಸಿತ್ತು. ಎಡೆಬಿಡದೇ ಸುರಿಯುತ್ತಿದ್ದ ಮಳೆಯಿಂದಾಗಿ ಶಾಲಾ-ಕಾಲೇಜು, ಕಚೇರಿಗಳಿಗೇ ರಜೆ ನೀಡಲಾಗಿತ್ತು. ಅಂತಹುದರಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಹೇಗೆ ನಡೆಯುತ್ತೆ ಹೇಳಿ. ಜಿಟ ಜಿಟಿ ಮಳೆಯಿಂದ ಮೈದಾನವೆಲ್ಲ ೊದ್ದೆಯಾಗಿತ್ತು. ಪಿಚ್ ಕೆಸರು ಗದ್ದೆಯಾಗಿತ್ತು. ಆದರೆ, ಎರಡೇ ದಿನದ ಸಮಯದಲ್ಲಿ ಮೈದಾನದ ಸಿಬ್ಬಂದಿ ಪಿಚ್ ರೆಡಿ ಮಾಡಿದ್ದಾರೆ.

ಅತ್ಯಾಧುನಿಕ ಮೆಶಿನರಿ, ಹೆಲಿಕಾಪ್ಟರ್ ಏನೆಲ್ಲ ಬಳಸಿದರೂ ಒದ್ದೆ ಕಡಿಮೆಯಾಗದಾಗ ಪಿಚ್ ಮೇಲೆ ಬೆಂಕಿ ಹಚ್ಚಿ ಬಿಸಿ ಶಾಖ ನೀಡಿ ಪಿಚ್ ರೆಡಿ ಮಾಡಿದ್ಧಾರೆ. ಭಾರತ ವೆಸ್ಟ್ ಇಂಡೀಸ್ ಸೇರಿದಂತೆ ಕೆಲ ರಾಷ್ಟ್ರಗಳಲ್ಲಷ್ಟೇ ಇಂತಹ ತಾಂತ್ರಿಕತೆಯನ್ನ ಬಳಸಲಾಗುತ್ತೆ.

ಇತ್ತ, ಪಿಚ್ ಒದ್ದೆಯಾಗಿದ್ದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್ ಕ್ರೀಡಾಂಗಣದ ಸಿಮೆಂಟ್ ರಸ್ತೆ ಮೇಲೇ ಬ್ಯಾಟಿಂಗ್ ಅಭ್ಯಾಸ ನಡೆಸಿ ಗಮನ ಸೆಳೆದಿದ್ದರು.