Asianet Suvarna News Asianet Suvarna News

ಸೂಪರ್‌ ಕಪ್‌: ಬಿಎಫ್‌ಸಿಗೆ ಸೋಲು

ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಬೆಂಗಳೂರು ಎಫ್’ಸಿ ಸೂಪರ್ ಕಪ್’ನಲ್ಲಿ ಚೆನ್ನೈ ಸಿಟಿ ಎಫ್‌ಸಿಗೆ ಶರಣಾಗಿದೆ. 

Chennai City breaks Bengaluru hearts makes it to semifinals
Author
Bhubaneswar, First Published Apr 5, 2019, 1:57 PM IST

ಭುವನೇಶ್ವರ್‌(ಏ.05): ಗುರುವಾರ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಸೂಪರ್‌ ಕಪ್‌ ಫುಟ್ಬಾಲ್‌ ಟೂರ್ನಿಯ ಮೊಲದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಚೆನ್ನೈ ಸಿಟಿ ಎಫ್‌ಸಿ, ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ವಿರುದ್ಧ 2-1 ಗೋಲುಗಳಲ್ಲಿ ಗೆಲುವು ಸಾಧಿಸಿದೆ. 

ಬೆಂಗಳೂರು ಚಾಂಪಿಯನ್ಸ್ ತಂಡಗಳಿಗೆ ಕ್ರೀಡಾಂಗಣ ಸಮಸ್ಯೆ

ಐ-ಲೀಗ್‌ ಚಾಂಪಿಯನ್‌ ಚೆನ್ನೈ ತಂಡ ಸೆಮಿಫೈನಲ್‌ ಪ್ರವೇಶಿಸಿದ್ದು ಈ ಋುತುವಿನಲ್ಲಿ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಚೆನ್ನೈ ಪರ ನೆಸ್ಟರ್‌ ಜೆಸಸ್‌ (15ನೇ ನಿ.), ಪೆಡ್ರೊ ಮಾನ್ಜಿ (55ನೇ ನಿ.) ಹಾಗೂ ಬಿಎಫ್‌ಸಿ ಪರ ಸುನಿಲ್‌ ಚೆಟ್ರಿ (52ನೇ ನಿ.) ಗೋಲುಗಳಿಸಿದರು.

ಕಪ್ ನಮ್ದೆ: ಗೋವಾ ಮಣಿಸಿ ISL ಪ್ರಶಸ್ತಿ ಗೆದ್ದ ಬೆಂಗಳೂರು FC!

ಪಂದ್ಯದ 51ನೇ ನಿಮಿಷದಲ್ಲಿ ಬಿಎಫ್’ಸಿ ಪಡೆಗೆ ಮತ್ತೊಂದು ಗೋಲು ಬಾರಿಸುವ ಅವಕಾಶ ಸಿಕ್ಕಿತ್ತಾದರೂ ಚೆನ್ನೈ ಗೋಲ್ ಕೀಪರ್ ಮೌರೋ ಬೌರಾಚಿಯೋ ಅವಕಾಶ ನೀಡಲಿಲ್ಲ.
 

Follow Us:
Download App:
  • android
  • ios