ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಕಾರ್ಯಕಾರಿ ಸಚಿವ ಅಮಿತಾಭ್ ಚೌಧರಿ ಹಾಗೂ ಜನರಲ್ ಮ್ಯಾನೇಜರ್ ಎಂ. ವಿ ಶ್ರೀಧರ್ ಗುರುವಾರದಂದು ಟೀಂ ಇಂಡಿಯಾದ ಆಟಗಾರರೊಂದಿಗೆ ಸಭೆ ನಡೆಸಿದ್ದಾರೆ. ಆದರೆ ಈಗಿನ್ನೂ ಸಭೆಯಲ್ಲಿ ಕೈಗೊಂಡ ನಿರ್ಧಾರದ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆಯ ಮೇಲೆ ಆಟಗಾರರಿಗಿರುವ ಅಸಮಾಧಾನದ ಕುರಿತಾಗಿ ಚರ್ಚಿಸಲು ಈ ಸಭೆ ಕರೆಯಲಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಅಮಿತಾಬ್ ಚೌಧರಿ ಕೋಚ್ ಕುಂಬ್ಳೆ ಹಾಗೂ ಕ್ಯಾಪ್ಟನ್ ಕೊಹ್ಲಿಯ ನಡುವಿರುವ ಮನಸ್ತಾಪದ ವಿಚಾರವನ್ನು ತಳ್ಳಿ ಹಾಕಿದ್ದಾರೆ.
ಮುಂಬೈ(ಮೇ.02): ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಕಾರ್ಯಕಾರಿ ಸಚಿವ ಅಮಿತಾಭ್ ಚೌಧರಿ ಹಾಗೂ ಜನರಲ್ ಮ್ಯಾನೇಜರ್ ಎಂ. ವಿ ಶ್ರೀಧರ್ ಗುರುವಾರದಂದು ಟೀಂ ಇಂಡಿಯಾದ ಆಟಗಾರರೊಂದಿಗೆ ಸಭೆ ನಡೆಸಿದ್ದಾರೆ. ಆದರೆ ಈಗಿನ್ನೂ ಸಭೆಯಲ್ಲಿ ಕೈಗೊಂಡ ನಿರ್ಧಾರದ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆಯ ಮೇಲೆ ಆಟಗಾರರಿಗಿರುವ ಅಸಮಾಧಾನದ ಕುರಿತಾಗಿ ಚರ್ಚಿಸಲು ಈ ಸಭೆ ಕರೆಯಲಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಅಮಿತಾಬ್ ಚೌಧರಿ ಕೋಚ್ ಕುಂಬ್ಳೆ ಹಾಗೂ ಕ್ಯಾಪ್ಟನ್ ಕೊಹ್ಲಿಯ ನಡುವಿರುವ ಮನಸ್ತಾಪದ ವಿಚಾರವನ್ನು ತಳ್ಳಿ ಹಾಕಿದ್ದಾರೆ.
ಯಾವತ್ತು ಟೀಂ ಇಂಡಿಯಾ ICC ಚಾಂಪಿಯನ್ಸ್ ಟ್ರೋಫಿಗಾಗಿ ಇಂಗ್ಲೆಂಡ್'ಗೆ ತಲುಪಿದಾಗಿನಿಂದ ಕುಂಬ್ಳೆ ಹಾಗೂ ಕೊಹ್ಲಿ ನಡುವಿನ ವಿವಾದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೂನ್ 4 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧ ಆಡಲಿರುವ ಟೀಂ ಇಂಡಿಯಾದ ಆಟಗಾರರ ಗಮನ ಸಂಪೂರ್ಣವಾಗಿ ಪಂದ್ಯದ ಮೇಲಿರಬೇಕು ಎಂಬುವುದು ಪ್ರಶಂಸಕರ ಇಚ್ಛೆಯಾಗಿದೆ. ಆದರೆ ಬೆಂಗಳೂರು ಮಿರರ್ ಇದೇ ವಿಚಾರವಾಗಿ ವರದಿಯೊಂದನ್ನು ಬಿತ್ತರಿಸಿದ್ದು ಬಾಂಗ್ಲಾ ವಿರುದ್ಧ ನಡೆದ ಅಭ್ಯಾಸ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆಯ ನಡುವೆ ಯಾವುದೇ ಮಾತುಕತೆ ಇಲ್ಲ ಎಂದು ತಿಳಿಸಿದೆ.
ಇಷ್ಟೇ ಅಲ್ಲದೆ ಕೆಲ ಕ್ರಿಕೆಟ್ ಪರಿಕರಗಳೊಂದಿಗೆ ಅನಿಲ್ ಕುಂಬ್ಳೆ ಪ್ರ್ಯಾಕ್ಟೀಸ್ ನೆಟ್ ಬಳಿ ಬರುತ್ತಿದ್ದಂತೆಯೇ, ಟೀಂ ಇಂಡಿಯಾದ ಕ್ಯಾಪ್ಟನ್ ನೆಟ್'ನಿಂದ ಹೊರ ಸರಿದಿದ್ದಾರೆ ಎಂಬುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಕೋಚ್ ಕುಂಬ್ಳೆ ಹಾಗೂ ಕ್ಯಾಪ್ಟನ್ ಕೊಹ್ಲಿ ನಡುವಿನ ಮನಸ್ತಾಪ ದೂರವಾಗಿ ಇಬ್ಬರ ಸಂಬಂಧ ಸರಿಯಾಗಲಿ ಎಂಬುವುದೇ ಭಾರತೀಯರ ಆಶಯವಾಗಿದೆ.
