ಮುಂಬೈ(ಮಾ.06): ಐಪಿಎಲ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ಇತರ ತಂಡಗಳಿಂತ ಹೆಚ್ಚಿನ ತಯಾರಿ ನಡೆಸುತ್ತಿದೆ. 12ನೇ ಆವೃತ್ತಿ ಟೂರ್ನಿಗೆ ಮುಂಬೈ ಇಂಡಿಯನ್ಸ್ ಸೇರಿಕೊಂಡಿರುವ ಟೀಂ ಇಂಡಿಯಾ ಆಲ್ರೌಂಡರ್ ಯುವರಾಜ್ ಸಿಂಗ್ ಜರ್ಸಿ ಬಿಡುಗಡೆಯಾಗಿದೆ. ಮುಂಬೈ ಇಂಡಿಯನ್ಸ್ ಯುವಿ ಜರ್ಸಿಯನ್ನ ಬಿಡುಗಡೆ ಮಾಡಿದೆ.

 

 

ಇದನ್ನೂ ಓದಿ: ರೋಹಿತ್ ಶರ್ಮಾ ಟ್ರೋಲ್ ಮಾಡಿದ ಮುಂಬೈ ಇಂಡಿಯನ್ಸ್!

ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಮೂಲ ಬೆಲೆ 1 ಕೋಟಿ ರೂಪಾಯಿ ನೀಡಿ ಯುವರಾಜ್ ಸಿಂಗ್ ಅವರನ್ನ ಖರೀದಿಸಿತ್ತು. 2018ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕಳಪೆ ಪ್ರದರ್ಶನ ನೀಡಿದ ಯುವಿ 8 ಪಂದ್ಯಗಳಿಂದ 65 ರನ್ ಸಿಡಿಸಿದ್ದರು. 

ಇದನ್ನೂ ಓದಿ: ಐಪಿಎಲ್ 2019: ಮುಂಬೈ ಇಂಡಿಯನ್ಸ್‌ಗೆ ಹೊಸ ಜರ್ಸಿ!

2019ರ ಐಪಿಎಲ್ ಟೂರ್ನಿಯಲ್ಲಿ ಯುವಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 2011ರ ವಿಶ್ವಕಪ್ ಹೀರೋ ಅಬ್ಬರದ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಯುವಿ ಮತ್ತೆ ಘರ್ಜಿಸುತ್ತಾರ ಅನ್ನೋದು ಐಪಿಎಲ್ ಟೂರ್ನಿಯಲ್ಲಿ ಸ್ಪಷ್ಟವಾಗಲಿದೆ.