ಈ ಬಾರಿಯ ಐಪಿಎಲ್'ನಲ್ಲಿ ಕನ್ನಡ ಕಲರವ

First Published 5, Apr 2018, 5:55 PM IST
Catch IPL in Kannada commentary from April 7
Highlights

ಏ.7 ರಂದು ಮುಂಬೈ'ನಲ್ಲಿ ಸಂಜೆ 8 ಗಂಟೆಯೊಂದಿಗೆ ಉದ್ಘಾಟನೆಯೊಂದಿಗೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಆರಂಭವಾಗಲಿದೆ. 8 ತಂಡಗಳಿಂದ 60 ಪಂದ್ಯಗಳು ನಡೆಯಲಿವೆ.

ಬೆಂಗಳೂರು(ಏ.05): ಹನ್ನೊಂದನೆ ಐಪಿಎಲ್ ಪಂದ್ಯಗಳನ್ನು ಕನ್ನಡ ಪ್ರೇಕ್ಷಕರು ವೀಕ್ಷಕ ವಿವರಣೆ, ವಿಶ್ಲೇಷಣೆಗಳನ್ನು ಕನ್ನಡದಲ್ಲಿ ಕೇಳಬಹುದಾಗಿದೆ.

ಸ್ಟಾರ್ ಸುವರ್ಣ ಪ್ಲಸ್'ನಲ್ಲಿ ಕನ್ನಡ ವೀಕ್ಷಕ ವಿವರಣೆಯೊಂದಿಗೆ ಪಂದ್ಯಗಳು ಪ್ರಸಾರವಾಗಲಿದ್ದು ಖ್ಯಾತ ಕ್ರಿಕೆಟಿಗರಾದ ಸುನಿಲ್ ಜೋಷಿ, ವಿಜಯ್ ಭಾರದ್ವಾಜ್,ಸುಜಿತ್ ಸೋಮ್'ಸುಂದರ್, ಅಕಿಲ್ ಬಾಲಚಂದ್ರ, ಚಂದ್ರಮೌಳಿ ಕಣವಿ, ಜಿಕೆ ಅನಿಲ್ ಕುಮಾರ್, ಜಿ.ಆರ್.ವಿಶ್ವನಾಥ್ ಹಾಗೂ ಶ್ರೀನಿವಾಸ್ ಮೂರ್ತಿ ವೀಕ್ಷಕ ವಿವರಣೆ ನೀಡಲಿದ್ದಾರೆ.

ಏ.7 ರಂದು ಮುಂಬೈ'ನಲ್ಲಿ ಸಂಜೆ 8 ಗಂಟೆಯೊಂದಿಗೆ ಉದ್ಘಾಟನೆಯೊಂದಿಗೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಆರಂಭವಾಗಲಿದೆ. 8 ತಂಡಗಳಿಂದ 60 ಪಂದ್ಯಗಳು ನಡೆಯಲಿವೆ. ಮೇ.27ರಂದು ಮುಂಬೈನಲ್ಲಿಯೇ ಫೈನಲ್ ಪಂದ್ಯ ನಡೆಯಲಿದೆ.

loader