Asianet Suvarna News Asianet Suvarna News

ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ: ಭಾರತದ ಡಿ.ಗುಕೇಶ್‌ಗೆ ಮೊದಲ ಸೋಲು

ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ., ಇದೇ ವೇಳೆ 7ನೇ ಸುತ್ತಿನಲ್ಲಿ ಪ್ರಜ್ಞಾನಂದ ಅಮೆರಿಕದ ಕರುನಾ ವಿರುದ್ಧ ಡ್ರಾ ಸಾಧಿಸಿದರೆ, ವಿದಿತ್‌ ಅಜರ್‌ಬೈಜಾನ್‌ನ ನಿಜತ್‌ ಅಬಸೊವ್‌ ವಿರುದ್ಧ ಡ್ರಾ ಸಾಧಿಸಿ, ಜಂಟಿ 5ನೇ ಸ್ಥಾನಕ್ಕೇರಿದರು.

Candidates Chess D Gukesh Loses to Alireza Firouza kvn
Author
First Published Apr 13, 2024, 9:15 AM IST

ಟೊರೊಂಟೊ: ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಭಾರತದ 17 ವರ್ಷ ಗ್ರ್ಯಾಂಡ್‌ ಮಾಸ್ಟರ್‌ ಡಿ.ಗುಕೇಶ್‌ ಮೊದಲ ಸೋಲು ಕಂಡಿದ್ದಾರೆ. 7ನೇ ಸುತ್ತಿನಲ್ಲಿ ಅವರು ಫ್ರಾನ್ಸ್‌ನ ಫಿರೌಜಾ ಅಲಿರೇಜಾ ವಿರುದ್ಧ ಸೋಲುಂಡರು. ಇದರೊಂದಿಗೆ 2ನೇ ಸ್ಥಾನಕ್ಕೆ ಗುಕೇಶ್‌ ಕುಸಿದಿದ್ದಾರೆ. ಆರ್‌.ಪ್ರಜ್ಞಾನಂದ, ಫ್ಯಾಬಿಯೋ ಕರುನಾ ಜೊತೆ 2ನೇ ಸ್ಥಾನ ಹಂಚಿಕೊಂಡಿದ್ದಾರೆ.

ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ., ಇದೇ ವೇಳೆ 7ನೇ ಸುತ್ತಿನಲ್ಲಿ ಪ್ರಜ್ಞಾನಂದ ಅಮೆರಿಕದ ಕರುನಾ ವಿರುದ್ಧ ಡ್ರಾ ಸಾಧಿಸಿದರೆ, ವಿದಿತ್‌ ಅಜರ್‌ಬೈಜಾನ್‌ನ ನಿಜತ್‌ ಅಬಸೊವ್‌ ವಿರುದ್ಧ ಡ್ರಾ ಸಾಧಿಸಿ, ಜಂಟಿ 5ನೇ ಸ್ಥಾನಕ್ಕೇರಿದರು.

IPL 2024 ಕುಲ್ದೀಪ್‌, ಜೇಕ್‌ ಅಬ್ಬರಕ್ಕೆ ಬೆಚ್ಚಿದ ಲಖನೌ!

ಇನ್ನು ಮಹಿಳೆಯರ ವಿಭಾಗದಲ್ಲಿ ಆರ್‌. ವೈಶಾಲಿಗೆ 3ನೇ ಸೋಲು ಎದುರಾಗಿದೆ. ಟೂರ್ನಿಯಲ್ಲಿ ಅವರು ನಿರೀಕ್ಷಿತ ಪ್ರದರ್ಶನ ನೀಡಲು ಪದೇಪದೇ ವಿಫಲರಾಗುತ್ತಿದ್ದಾರೆ. ಇದೇ ವೇಳೆ, ಕೊನೆರು ಹಂಪಿ ಮತ್ತೊಂದು ಡ್ರಾಗೆ ತೃಪ್ತಿಪಟ್ಟಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ ಪಂದ್ಯಕ್ಕೆ ಅರ್ಹತೆ ಪಡೆಯುವ ಈ ಇಬ್ಬರ ಕನಸು ಬಹುತೇಕ ಭಗ್ನಗೊಂಡಿದೆ.

ಬೆಂಗ್ಳೂರು 10ಕೆಗೆ ಕೀನ್ಯಾದ ಅನ್ಯಾಂಗೋ

ಬೆಂಗಳೂರು: ಏ.28ರಂದು ನಡೆಯಲಿರುವ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ವಿಶ್ವದ 2ನೇ ಅತಿವೇಗದ 10 ಕಿ.ಮೀ. ಓಟಗಾರ್ತಿ, ಕೀನ್ಯಾದ ಎಮಾಕ್ಯುಲೇಟ್‌ ಅನ್ಯಾಂಗೋ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಅನ್ಯಾಂಗೋ ಇತ್ತೀಚೆಗೆ ವ್ಯಾಲೆನ್ಸಿಯಾದಲ್ಲಿ 28 ನಿಮಿಷ 57 ಸೆಕೆಂಡ್‌ಗಳಲ್ಲಿ 10 ಕಿ.ಮೀ. ಓಟ ಪೂರೈಸಿದ್ದರು. ಕೂಟ ದಾಖಲೆ (30 ನಿಮಿಷ 35 ಸೆಕೆಂಡ್‌)ಗಿಂತ ಕಡಿಮೆ ಸಮಯದಲ್ಲಿ 10ಕೆ ಓಡಿರುವ ದಾಖಲೆ ಹೊಂದಿರುವ ಕೀನ್ಯಾದ ಇನ್ನೂ ಐವರು ಓಟಗಾರ್ತಿಯರು ಪಾಲ್ಗೊಳ್ಳಲಿರುವುದು ವಿಶೇಷ ಎನಿಸಿದೆ.

ಭಾರತ ತೊರೆದು ಕೆನಡಾ ಪರ ಕ್ರಿಕೆಟ್ ಆಡಲು ಮುಂದಾಗಿದ್ದ ಬುಮ್ರಾ..! ಅಚ್ಚರಿ ಮಾಹಿತಿ ಬಿಚ್ಚಿಟ್ಟ ಪತ್ನಿ ಸಂಜನಾ

ಸೌದಿ ಲೀಗ್‌: ಫುಟ್ಬಾಲಿಗನಿಗೆ ಅಭಿಮಾನಿಯಿಂದ ಚಾಟಿ ಏಟು!

ರಿಯಾದ್‌: ಫುಟ್ಬಾಲ್‌ ಮೈದಾನದಲ್ಲಿ ಆಟಗಾರರು ಕಿತ್ತಾಡುವುನ್ನು ನೋಡಿದ್ದೇವೆ. ಸೌದಿ ಅರೇಬಿಯಾದ ಫುಟ್ಬಾಲ್‌ ಲೀಗ್‌ನ ಪಂದ್ಯವೊಂದರಲ್ಲಿ ಫುಟ್ಬಾಲಿಗ ಹಾಗೂ ಅಭಿಮಾನಿ ನಡುವೆ ಕಿತ್ತಾಟ ನಡೆದಿದೆ. ಎಷ್ಟರ ಮಟ್ಟಿಗೆ ಎಂದರೆ ಅಭಿಮಾನಿಯು ಆಟಗಾರನಿಗೆ ಚಾಟಿಯಿಂದ ಹೊಡೆದಿದ್ದಾನೆ. ಅಲ್‌-ಇತಿಹಾದ್‌ ತಂಡದ ಆಟಗಾರ ಅಬ್ದೆರ್‌ರಜಾಕ್‌ ಹಮ್ದಲ್ಲಾ, ಪಂದ್ಯ ಮುಗಿದ ಮೇಲೆ ಡ್ರೆಸ್ಸಿಂಗ್‌ ಕೋಣೆಗೆ ತೆರಳುವಾಗ ಅಭಿಮಾನಿಯ ಮೇಲೆ ನೀರೆರೆಚಲು ಮುಂದಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಭಿಮಾನಿಯು ಚಾಟಿಯಿಂದ ಹಮ್ದಲ್ಲಾಗೆ ಹೊಡೆದಿದ್ದಾನೆ. ತಕ್ಷಣ ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಎಳೆದೊಯ್ದಿದ್ದಾರೆ.
 

Follow Us:
Download App:
  • android
  • ios