ಕೆನಡಾ(ಜು.24): ಕ್ರಿಕೆಟ್ ದಿಗ್ಗಜರು, ಸ್ಫೋಟಕ ಬ್ಯಾಟ್ಸ್‌ಮನ್, ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗರಾಗಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಮುಖಾಮುಖಿಯಾಗುತ್ತಿದ್ದಾರೆ. ಕೆನಡಾ ಗ್ಲೋಬಲ್ ಟಿ20 ಲೀಗ್ ಟೂರ್ನಿಯಲ್ಲಿ ಈ ಚುಟುಕು ಸ್ಪೆಷಲಿಸ್ಟ್‌ಗಳು ಕಣಕ್ಕಿಳಿಯುತ್ತಿದ್ದಾರೆ. 

ಇದನ್ನೂ ಓದಿ: ಕೆನಾಡ ಟಿ20 ಲೀಗ್‌ಗಿಂತಲೂ ಜನಪ್ರೀಯವಾಯಿತು ಕ್ರಿಸ್ ಗೇಲ್ ಕ್ಯಾಚ್!

2019ರ ಕೆನಡಾ ಗ್ಲೋಬಲ್ ಟಿ20 ಟೂರ್ನಿ ಜುಲೈ 25 ರಂದು ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಟೊರಂಟೊ ನ್ಯಾಶನಲ್ಸ್ ವ್ಯಾನ್‌ಕವರ್ ನೈಟ್ಸ್ ಹೋರಾಟ ನಡೆಸಲಿದೆ. ವಿಶೇಷ ಅಂದರೆ ಟೊರಂಟೊ ತಂಡಕ್ಕೆ ಯುವರಾಜ್ ಸಿಂಗ್ ನಾಯಕನಾಗಿದ್ದರೆ, ವ್ಯಾನ್‌ಕವರ್ ತಂಡಕ್ಕೆ ಕ್ರಿಸ್ ಗೇಲ್ ನಾಯರಾಗಿದ್ದಾರೆ. 

ಯುವರಾಜ್ ಸಿಂಗ್ ತಂಡದಲ್ಲಿ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಡಿಗ ಬ್ರೆಂಡನ್ ಮೆಕ್ಕಲಂ, ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್, ನ್ಯೂಜಿಲೆಂಡ್ ತಂಡದ ಮಿಚೆಲ್ ಮೆಕ್ಲೆನಾಘನ್ ಸೇರಿದಂತೆ ಸ್ಟಾರ್ ಆಟಗಾರರಿದ್ದಾರೆ. ಇತ್ತ ಕ್ರಿಸ್ ಗೇಲ್ ತಂಡದಲ್ಲಿ ಪಾಕಿಸ್ತಾನದ ಶೋಯಿಬ್ ಮಲ್ಲಿಕ್, ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಸೇರಿದಂತೆ ಬಲಿಷ್ಠ ಆಟಗಾರರಿದ್ದಾರೆ.

ಜುಲೈ 25 ರಿಂದ ಆಗಸ್ಟ್ 11ರ ವರೆಗೆ ಕೆನಡಾ ಗ್ಲೋಬಲ್ ಟಿ20 ಟೂರ್ನಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಳ್ಳುತ್ತಿವೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಸೌತ್ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್, ಜೆಪಿ ಡುಮಿನಿ, ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನರೈನ್, ಡ್ಪೇನ್ ಬ್ರಾವೋ, ಡರೆನ್ ಸಮಿ, ಶ್ರೀಲಂಕಾದ ತಿಸರಾ ಪರೇರಾ, ಪಾಕಿಸ್ತಾನದ ಮೊಹಮ್ಮ ಹಫೀಜ್,  ಶಾಹಿದ್ ಅಫ್ರಿದಿ ಸೇರಿದಂತೆ ಸ್ಟಾರ್ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳುತ್ತಿದ್ದಾರೆ.