ದ್ರಾವಿಡ್ ಅವರ ಕೋಚ್ ಅವಧಿ ವಿಸ್ತರಣೆಯಾದ ನಂತರ ಅವರ ಸಂಭಾವನೆ 4.5 ಕೋಟಿಗೆ ಏರಿಕೆಯಾಗಿದೆ. ಅಲ್ಲದೆ ಡೆಲ್ಲಿ ಡೇರ್ ಡೇವಿಲ್ ಮೆಂಟರ್ ಸ್ಥಾನವನ್ನು ಅವರು ತೊರೆದಿದ್ದರು.

ಮುಂಬೈ(ಜು.04): ಇದೊಂದು ರೀತಿಯಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಸಂದಿಗ್ಧ ಪರಿಸ್ಥಿತಿ ಎನ್ನಬಹುದು. ಭಾರತ 'ಎ' ಹಾಗೂ 'ಅಂಡರ್ 19' ತಂಡಕ್ಕೆ ಕೋಚ್ ಆಗಿ ಮತ್ತೆರಡು 2 ವರ್ಷ ನೇಮಕವಾದ ನಂತರ ಮೊದಲ ಬಾರಿಗೆ ತನ್ನ ತಂಡದ ಆಟಗಾರರಿಗೆ ಮಾರ್ಗದರ್ಶನ ಮಾಡುವ ಸೌಭಾಗ್ಯ ದೊರೆಯುತ್ತಿಲ್ಲ. ಜುಲೈ 15 ರಿಂದ 'ಅಂಡರ್ 19' ತಂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದು, ಇದೇ ಸಂದರ್ಭದಲ್ಲಿ 'ಭಾರತ ಎ' ತಂಡ 'ದಕ್ಷಿಣ ಆಫ್ರಿಕಾ' ಪ್ರವಾಸ ಕೈಗೊಂಡು 2 ಟೆಸ್ಟ್ ಹಾಗೂ ತ್ರಿಕೋನ ಏಕದಿನ ಸರಣಿಯನ್ನು ಆಡಲಿದೆ. ಈ ಸಂದರ್ಭದಲ್ಲಿ ದ್ರಾವಿಡ್ 'ಎ' ತಂಡದೊಂದಿಗೆ ಹೊರಡಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿನ್ನಲೆಯಲ್ಲಿ ಅಂಡರ್ 18 ತಂಡವು ದ್ರಾವಿಡ್ ಅವರ ಮಾರ್ಗದರ್ಶನವನ್ನು ಮಿಸ್ ಮಾಡಿಕೊಳ್ಳಲಿದೆ. ಇದಕ್ಕೆ ಸ್ಪಷ್ಟಿಕರಣ ನೀಡಿರುವ ಬಿಸಿಸಿಐ ಅಧಿಕಾರಿಗಳು ದ್ರಾವಿಡ್ ಅವರ ಜಾಗಕ್ಕೆ ನಾವು ಮತ್ತೊಬ್ಬ ಕೋಚ್ ಅವರನ್ನು ನೇಮಕ ಮಾಡುತ್ತೇವೆ' ಎಂದು ತಿಳಿಸಿದ್ದಾರೆ. ದ್ರಾವಿಡ್ ಅವರ ಕೋಚ್ ಅವಧಿ ವಿಸ್ತರಣೆಯಾದ ನಂತರ ಅವರ ಸಂಭಾವನೆ 4.5 ಕೋಟಿಗೆ ಏರಿಕೆಯಾಗಿದೆ. ಅಲ್ಲದೆ ಡೆಲ್ಲಿ ಡೇರ್ ಡೇವಿಲ್ ಮೆಂಟರ್ ಸ್ಥಾನವನ್ನು ಅವರು ತೊರೆದಿದ್ದರು.