ಈಗ ಇಡೀ ತಂಡವೇ ಅತಹ ಬಲಿಷ್ಟ ಆಟಗಾರರನ್ನು ಹೊಂದಿದೆ ಎಂದು ವೆಸ್ಟ್'ಇಂಡಿಸ್ ಕ್ರಿಕೆಟ್ ದಿಗ್ಗಜ ಅಭಿಪ್ರಾಯಪಟ್ಟಿದ್ದಾರೆ

ಲಂಡನ್(ಮೇ.26): ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ವೆಸ್ಟ್ ಇಂಡೀಸ್‌'ನ ಮಾಜಿ ನಾಯಕ ಬ್ರಿಯನ್ ಲಾರಾ ಭವಿಷ್ಯ ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2015ರ ಏಕದಿನ ವಿಶ್ವಕಪ್ ಬಳಿಕ ಇಂಗ್ಲೆಂಡ್ ತಂಡ 50 ಓವರ್‌'ಗಳ ಆಟಕ್ಕೆ ರಚಿಸಿರುವ ತಂಡ ಅತ್ಯದ್ಭುತವಾಗಿದೆ ಎಂದಿದ್ದಾರೆ.

ತಂಡದಲ್ಲಿ ಆಲ್ರೌಂಡರ್‌'ಗಳ ಸಂಖ್ಯೆ ಹೆಚ್ಚಿದ್ದು, ಇನ್ನಿಂಗ್ಸ್ ಕಟ್ಟುವುದು ಹೇಗೆ ಎಂದು ಬ್ಯಾಟ್ಸ್‌ಮನ್‌ಗಳಿಗೆ ಬಹಳ ಚೆನ್ನಾಗಿ ತಿಳಿದಿದೆ. ತಂಡದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ವಾರಾವರಣ ಅವರಿಗೆ ಸಹಕಾರಿಯಾಗಲಿದೆ ಎಂದು ಲಾರಾ ಹೇಳಿದ್ದಾರೆ.

ಮೊದಲೆಲ್ಲಾ ಇಯಾನ್ ಬಾಥಮ್, ಆ್ಯಂಡ್ರೋ ಪ್ಲಿಂಟಾಫ್ ಅವರಂತಹ ಕೆಲವು ಆಟಗಾರರು ಇಂಗ್ಲೆಂಡ್ ತಂಡದಲ್ಲಿರುತ್ತಿದ್ದರು. ಆದರೆ ಈಗ ಇಡೀ ತಂಡವೇ ಅತಹ ಬಲಿಷ್ಟ ಆಟಗಾರರನ್ನು ಹೊಂದಿದೆ ಎಂದು ವೆಸ್ಟ್'ಇಂಡಿಸ್ ಕ್ರಿಕೆಟ್ ದಿಗ್ಗಜ ಅಭಿಪ್ರಾಯಪಟ್ಟಿದ್ದಾರೆ