ಇನ್ನು ತಂಡಗಳ ಬ್ರ್ಯಾಂಡ್ ಮೌಲ್ಯದಲ್ಲಿ ಮುಂಬೈ ಇಂಡಿಯನ್ಸ್ ಪ್ರಸಕ್ತ ವರ್ಷ 106 ಮಿಲಿಯನ್'ಗೆ ಏರಿಕೆಯಾಗುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದೆ.

ಮುಂಬೈ(ಆ.24): 10ನೇ ಆವೃತ್ತಿಯ ಐಪಿಎಲ್ ಪೂರ್ಣಗೊಂಡು ತಿಂಗಳುಗಳ ಬಳಿಕ ಕಾರ್ಪೋರೇಟ್ ಹಣಕಾಸು ಸಂಸ್ಥೆಯೊಂದು ತಂಡಗಳ ಬ್ರ್ಯಾಂಡ್ ಮೌಲ್ಯ ಕುರಿತು ಮಾಹಿತಿ ಒದಗಿಸಿದ್ದು, ಆರ್‌'ಸಿಬಿ ತಂಡ ನೀರಸ ಪ್ರದರ್ಶನ ತೋರಿದ ಹೊರತಾಗಿಯೂ ಬ್ರ್ಯಾಂಡ್ ಮೌಲ್ಯ ಸುಮಾರು ₹575 ಕೋಟಿಗೆ ಏರಿಕೆಯಾಗಿದೆ. ಅಲ್ಲದೇ ಐಪಿಎಲ್ ಟೂರ್ನಿಯ ಒಟ್ಟಾರೆ ಬ್ರ್ಯಾಂಡ್ ಮೌಲ್ಯದಲ್ಲೂ ಭಾರೀ ಏರಿಕೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಆವೃತ್ತಿ ಯಾವುದೇ ವಿವಾದಗಳಿಲ್ಲದೆ ಅಂತ್ಯಗೊಂಡ ಬಳಿಕ ಪಂದ್ಯಾವಳಿ ಬ್ರ್ಯಾಂಡ್ ಮೌಲ್ಯದಲ್ಲಿ ಶೇ.13.9ರಷ್ಟು ಏರಿಕೆ ಕಂಡು ಬಂದಿದ್ದು, ಸುಮಾರು ₹ 34 ಸಾವಿರ ಕೋಟಿಯಷ್ಟು ಏರಿಕೆಯಾಗಿದೆ ಎಂದು ಮಾಹಿತಿ ಒದಗಿಸಿದೆ.

ಇನ್ನು ತಂಡಗಳ ಬ್ರ್ಯಾಂಡ್ ಮೌಲ್ಯದಲ್ಲಿ ಮುಂಬೈ ಇಂಡಿಯನ್ಸ್ ಪ್ರಸಕ್ತ ವರ್ಷ 106 ಮಿಲಿಯನ್'ಗೆ ಏರಿಕೆಯಾಗುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದೆ.