ನವದೆಹಲಿ(ಮೇ.01): ಏಷ್ಯನ್‌ ಗೇಮ್ಸ್‌ ಹಾಗೂ ಚಾಂಪಿಯನ್‌ಶಿಪ್‌ ಚಿನ್ನದ ಪದಕ ವಿಜೇತ ಬಾಕ್ಸರ್‌ ಅಮಿತ್‌ ಪಂಗಲ್‌ ಹಾಗೂ 2017ರ ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಗೌರವ್‌ ಬಿಧೂರಿ ಹೆಸರನ್ನು ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಮಂಗಳವಾರ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. 

ಅರ್ಜುನ ಪ್ರಶಸ್ತಿ: ಬುಮ್ರಾ,ಶಮಿ, ಜಡೇಜಾ ಹೆಸರು ಶಿಫಾರಸು

ಕಳೆದ ವರ್ಷವೂ ಅಮಿತ್‌ ಹೆಸರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ 2012ರಲ್ಲಿ ಡೋಪಿಂಗ್‌ ಪ್ರಕರಣದಲ್ಲಿ ಸಿಲುಕಿ 1 ವರ್ಷ ನಿಷೇಧ ಅನುಭವಿಸಿದ್ದ ಕಾರಣ, ಅಮಿತ್‌ ಹೆಸರನ್ನು ಆಯ್ಕೆ ಸಮಿತಿ ಪರಿಗಣಿಸಿರಲಿಲ್ಲ. ಈ ವರ್ಷ ಮತ್ತೊಮ್ಮೆ ಅವರ ಹೆಸರನ್ನು ಶಿಫಾರಸು ಮಾಡಿರುವ ಬಿಎಫ್‌ಐ, ಪ್ರಶಸ್ತಿ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದೆ. 

ಮಹಿಳಾ ತಂಡದ ಸಹಾಯಕ ಕೋಚ್‌ ಸಂಧ್ಯಾ ಗುರುಂಗ್‌ ಹಾಗೂ ಮಹಿಳಾ ತಂಡದ ಮಾಜಿ ಪ್ರಧಾನ ಕೋಚ್‌ ಶಿವ ಸಿಂಗ್‌ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗದೆ.