Asianet Suvarna News Asianet Suvarna News

ಸ್ಫೋಟಕ ಹೊಡೆತ; ಕೂದಲೆಳೆಯುವ ಅಂತರದಲ್ಲಿ ಬೌಲರ್ ಪಾರು!

ಬೌಲರ್ ಮಾರಕ ದಾಳಿಗೆ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಅಷ್ಟೇ ವೇಗದಲ್ಲಿ ತಿರುಗೇಟು ನೀಡುತ್ತಾರೆ. ಇದೇ ರೀತಿ ಸ್ಫೋಟಕ ಹೊಡೆತದಿಂದ ಬೌಲರ್ ಸೆಕೆಂಡ್‌ಗಳ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
 

Bowler Mickey Edwards narrowly escape from front foot blast at women cricket
Author
Bengaluru, First Published Sep 22, 2019, 8:14 PM IST

ಸಿಡ್ನಿ(ಸೆ.22): ಕ್ರಿಕೆಟ್ ಅಪಾಯಕಾರಿ ಆಟವೂ ಹೌದು. ಬೌಲರ್‌ಗಳ ಮಾರಕ ಬೌನ್ಸರ್ ತೆಲೆಗೆ ಬಡಿದು ಬ್ಯಾಟ್ಸ್‌ಮನ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನು ಟಿ20 ಕ್ರಿಕೆಟ್‌ನಿಂದ ಸ್ಫೋಟಕ ಹೊಡೆತಕ್ಕೆ ಬೌಲರ್‌ಗಳು ಅಪಾಯ ಎದುರಿಸಿದ್ದಾರೆ. ಇದೀಗ  ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಸ್ಫೋಟಕ ಹೊಡೆತದಿಂದ ಬೌಲರ್ ಕೂದಲೆಳೆಯುವ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.

ಇದನ್ನೂ ಓದಿ: INDvSA:ನೆಚ್ಚಿನ ಮೈದಾನದಲ್ಲಿ ಶಾಕ್; ಆದರೂ ದಾಖಲೆ ಬರೆದ ರೋಹಿತ್!

ನ್ಯೂ ಸೌಥ್ ವೇಲ್ಸ್ ತಂಡದ ಮಿಕಿ ಎಡ್ವರ್ಡ್ಸ್ ಕ್ವೀನ್ಸ್‌ಲ್ಯಾಂಡ್ ತಂಡದ ಸ್ಯಾಮ್ ಹೀಝ್‌ಲೆಟ್‌ಗೆ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಸ್ಯಾಮ್ ಫ್ರಂಟ್ ಫೂಟ್ ಬಂದು ಭರ್ಜರಿ ಹೊಡೆತಕ್ಕೆ ಮುಂದಾಗಿದ್ದಾರೆ. ಸ್ಯಾಮ್ ಹೊಡೆತದಿಂದ ಚಿಮ್ಮಿದ ಬಾಲ್ ನೇರವಾಗಿ ಬೌಲರ್ ತಲೆಯತ್ತ ಧಾವಿಸಿತ್ತು. ತಕ್ಷಣವೇ ಕೈ ಅಡ್ಡ ಹಿಡಿದ ಮಿಕಿ ಅಫಾಯದಿಂದ ಪಾರಾಗಿದ್ದಾರೆ.

 

ಇದನ್ನೂ ಓದಿ: ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ನೆರವು; ಅಭಿಯಾನದಲ್ಲಿ ಕೊಹ್ಲಿ, ಶಾಸ್ತ್ರಿ!

ಅಪಾಯಕಾರಿ ಘಟನೆಯ ವಿಡಿಯೋ ವೈರಲ್ ಆಗಿದೆ. ಸೆಕೆಂಡ್‌ಗಳ ಅಂತರದಲ್ಲಿ ಮಿಕಿ ಪಾರಾಗಿದ್ದಾರೆ.  ಕೈ ಅಡ್ಡ ಹಿಜಿದ ಕಾರಣ ಮಣಿಕಟ್ಟಿಗೆ ಗಂಭೀರ ಗಾಯವಾಗಿದೆ.  ಸದ್ಯ ಚಿಕಿತ್ಸೆ ಪಡೆಯುತ್ತಿರುವ ಮಿಕಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
 

Follow Us:
Download App:
  • android
  • ios