ರಾಷ್ಟ್ರೀಯ ತಂಡದಲ್ಲಿ ಆಡುವುದಕ್ಕಾಗಿ ಆಟಗಾರರನ್ನು ಯಾರು ಆಯ್ಕೆ ಮಾಡುತ್ತಾರೆ ಎನ್ನುವುದು ಸಾಕಷ್ಟು ಗೊಂದಲ ಸೃಷ್ಟಿಸಿದೆ ಎಂದು ಬೋಪಣ್ಣ ತಿಳಿಸಿದ್ದಾರೆ.

ನವದೆಹಲಿ(ಜ.04): ಆಲ್ ಇಂಡಿಯಾ ಟೆನಿಸ್ ಸಂಸ್ಥೆ(ಎಐಟಿಎ)ಯಲ್ಲಿ ಯಾವ ಆಧಾರದಲ್ಲಿ ಆಟಗಾರರ ಆಯ್ಕೆ ಮಾಡಲಾಗುತ್ತದೆ ಎಂದು ಭಾರತದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಪ್ರಶ್ನಿಸಿದ್ದಾರೆ.

ಸ್ಪೇನ್ ವಿರುದ್ಧದ ಡೇವಿಸ್ ಕಪ್ ಟೂರ್ನಿಯಲ್ಲಿ ಗಾಯದ ಸಮಸ್ಯೆ ಎಂದು ರೋಹನ್ ಬೋಪಣ್ಣರನ್ನು ಹೊರಗಿಡಲಾಗಿತ್ತು.

2016ರ ಸೆಪ್ಟೆಂಬರ್ ವೇಳೆ ನಡೆದ ವಿಶ್ವ ಗುಂಪಿನ ಪ್ಲೇ ಆಫ್ ಟೂರ್ನಿಯ ವೇಳೆ ನಾನು ಯಾವುದೇ ಗಾಯದ ಸಮಸ್ಯೆಗೆ ಒಳಗಾಗಿರಲಿಲ್ಲ ಆದರೂ ನನ್ನನ್ನು ಹೊರಗಿಟ್ಟದ್ದು ಯಾಕೆ ಎನ್ನುವುದು ತಿಳಿದಿಲ್ಲ ಎಂದು ಬೋಪಣ್ಣ ಹೇಳಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಆಡುವುದಕ್ಕಾಗಿ ಆಟಗಾರರನ್ನು ಯಾರು ಆಯ್ಕೆ ಮಾಡುತ್ತಾರೆ ಎನ್ನುವುದು ಸಾಕಷ್ಟು ಗೊಂದಲ ಸೃಷ್ಟಿಸಿದೆ ಎಂದು ಬೋಪಣ್ಣ ತಿಳಿಸಿದ್ದಾರೆ.

ಪುಣೆಯಲ್ಲಿ ಫೆಬ್ರವರಿ ತಿಂಗಳಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಟೂರ್ನಿಗೆ ರೋಹನ್ ಬೋಪಣ್ಣ ಆಯ್ಕೆಯಾಗಿಲ್ಲ.