ಉದ್ಘಾಟನಾ ಪಂದ್ಯದಲ್ಲಿ ಹರಿಯಾಣ ವಾರಿಯರ್ಸ್ ಹಾಗೂ ಡೆಲ್ಲಿ ಗ್ಲಾಡಿಯೇಟರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ನವದೆಹಲಿ(ಜು.05): ಬಾಕ್ಸಿಂಗ್ ಸೂಪರ್ ಲೀಗ್ ಪಂದ್ಯಾವಳಿಯು ಇದೇ ಮೊದಲ ಬಾರಿಗೆ ಆಯೋಜನೆಯಾಗುತ್ತಿದ್ದು, ಬಹುತೇಕ ಬಾಲಿವುಡ್ ತಾರೆಯರೇ ತಂಡಗಳ ಮಾಲಿಕತ್ವವನ್ನು ಪಡೆದಿದ್ದಾರೆ.

ಖ್ಯಾತ ಹಾಲಿವುಡ್ ಮಾದಕ ತಾರೆ ನಟಿ ಸನ್ನಿ ಲಿಯೋನ್ ಪಂಜಾಬ್ ತಂಡವನ್ನು ಖರೀದಿಸಿದ್ದಾರೆ. ಸನ್ನಿ ತಂಡಕ್ಕೆ ಪಂಜಾಬ್ ಸುಲ್ತಾನ್ ಎಂದು ಹೆಸರಿಡಲಾಗಿದೆ.

ಇನ್ನು ರಾಣಾ ದಗ್ಗುಬಾಟಿ ಹಾಗೂ ಸುನಿಲ್ ಶೆಟ್ಟಿ ದಕ್ಷಿಣ ಭಾರತದ ತಂಡವನ್ನು ಖರೀದಿಸಿದ್ದು, ಅದಕ್ಕೆ ಬಾಹುಬಲಿ ಬಾಕ್ಸರ್ಸ್ ಎಂದು ಹೆಸರಿಟ್ಟಿದ್ದಾರೆ.

ಇದರ ಜತೆಗೆ ಎಂ.ಎಸ್. ಧೋನಿ ಖ್ಯಾತಿಯ ಚಿತ್ರದ ನಾಯಕ ಸುಶಾಂತ್ ಸಿಂಗ್ ಡೆಲ್ಲಿ ತಂಡವನ್ನು ಖರೀದಿಸಿದ್ದಾರೆ.

ಸೂಪರ್ ಬಾಕ್ಸಿಂಗ್ ಲೀಗ್ ಟೂರ್ನಿಯು ಜುಲೈ 7ರಿಂದ ನವದೆಹಲಿಯಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹರಿಯಾಣ ವಾರಿಯರ್ಸ್ ಹಾಗೂ ಡೆಲ್ಲಿ ಗ್ಲಾಡಿಯೇಟರ್ಸ್ ತಂಡಗಳು ಮುಖಾಮುಖಿಯಾಗಲಿವೆ.