ಬೆಂಗಳೂರು (ಸೆ.22):  ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ (ಸೆ.22)ರಂದು ಸಂಜೆ 7ಕ್ಕೆ ನಿಗದಿಗೊಂಡಿರುವ ಭಾರತ-ದಕ್ಷಿಣ ಆಫ್ರಿಕಾ ಟಿ-20 ಕ್ರಿಕೆಟ್‌ ಪಂದ್ಯದ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್‌ ಕಾರ್ಯಾಚರಣೆಗೊಳಿಲು ಮುಂದಾಗಿದೆ.

ರಾತ್ರಿ 11.30ಕ್ಕೆ ಪಂದ್ಯ ಅಂತ್ಯಗೊಂಡ ಬಳಿಕ ಸ್ಟೇಡಿಯಂನಿಂದ ಮನೆಗೆ ತೆರಳಲು ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್‌ ಕಾರ್ಯಾಚರಿಸಲಾಗುವುದು. ಶಿವಾಜಿನಗರ- ಕಾಡುಗೋಡಿ ಬಸ್‌ ನಿಲ್ದಾಣ, ಮೆಯೋಹಾಲ್‌- ಸರ್ಜಾಪುರ, ಬ್ರಿಗೇಡ್‌ ರಸ್ತೆ- ಎಲೆಕ್ಟ್ರಾನಿಕ್‌ ಸಿಟಿ, ಬನ್ನೇರುಘಟ್ಟನ್ಯಾಷನಲ್‌ ಪಾರ್ಕ್, ಶಾಂತಿನಗರ ಬಸ್‌ ನಿಲ್ದಾಣ- ಕೆಂಗೇರಿ ಕೆಎಚ್‌ಬಿ ಕ್ವಾಟ್ರ್ರಸ್‌, ಕೆಂಪೇಗೌಡ ಬಸ್‌ ನಿಲ್ದಾಣ- ಜನಪ್ರಿಯ ಲೇಔಟ್‌, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ- ನೆಲಮಂಗಲ, ಯಲಹಂಕ 5ನೇ ಹಂತ, ಬಾಗಲೂರು, ಕೆ.ಆರ್‌.ಮಾರುಕಟ್ಟೆ- ಆರ್‌.ಕೆ.ಹೆಗಡೆ ನಗರ ಮಾರ್ಗದಲ್ಲಿ ಈ ಬಸ್‌ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.