ಬಿಎಫ್’ಸಿ ತಂಡವು ಕ್ರೀಡಾಂಗಣಕ್ಕೆ ತೆರಳುತ್ತಿದ್ದ ವೇಳೆ ಆಟಗಾರರಿದ್ದ ಬಸ್ ನಡುರಸ್ತೆಯಲ್ಲೇ ಕೆಟ್ಟು ನಿಂತಿತು. ಹೀಗಾಗಿ, ಆಟಗಾರರು ಕೆಳಗಿಳಿದು ಸ್ವಲ್ಪ ದೂರ ಬಸ್ ತಳ್ಳಬೇಕಾಯಿತು.
ವೇಲೆನ್ಸಿಯಾ(ಆ.03): ಎಎಫ್‌ಸಿ ಕಪ್ ಅಂತರ ವಲಯ ಸೆಮೀಸ್ ಪಂದ್ಯಕ್ಕೆ ತಯಾರಿ ನಡೆಸಲು ಸ್ಪೇನ್‌ಗೆ ತೆರಳಿರುವ ಬೆಂಗಳೂರು ಎಫ್‌ಸಿ ತಂಡಕ್ಕೆ ಗುರುವಾರ ವಿಭಿನ್ನ ಸವಾಲು ಎದುರಾಯಿತು.
ಕ್ರೀಡಾಂಗಣಕ್ಕೆ ತೆರಳುತ್ತಿದ್ದ ವೇಳೆ ಆಟಗಾರರಿದ್ದ ಬಸ್ ನಡುರಸ್ತೆಯಲ್ಲೇ ಕೆಟ್ಟು ನಿಂತಿತು. ಹೀಗಾಗಿ, ಆಟಗಾರರು ಕೆಳಗಿಳಿದು ಸ್ವಲ್ಪ ದೂರ ಬಸ್ ತಳ್ಳಬೇಕಾಯಿತು.
ಬಿಎಫ್‌ಸಿ ಅಧಿಕೃತ ಟ್ವೀಟರ್ ಖಾತೆಯಲ್ಲಿ ಆಟಗಾರರು ಬಸ್ ತಳ್ಳುತ್ತಾ ಮೋಜಿನಲ್ಲಿ ತೊಡಗಿರುವ ವಿಡಿಯೋ ಹಾಕಲಾಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
