Asianet Suvarna News Asianet Suvarna News

ಐಪಿಎಲ್‌ ಆಡಲು ಅವಕಾಶ ಕೊಡಿ-ಸುಪ್ರೀಂ ಕೋರ್ಟ್‌ಗೆ ಅಂಧ ಕ್ರಿಕೆಟಿಗನ ಮನವಿ!

ಐಪಿಎಲ್ ಟೂರ್ನಿ ಆಡಬೇಕು ಕನಸು ಕಟ್ಟಿಕೊಟ್ಟಿರುವ ಅಂಧ ಕ್ರಿಕೆಟಿಗರೊಬ್ಬರು ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ತನಗೆ ಅವಕಾಶ ನೀಡಬೇಕು  ಎಂದು ಮನವಿ ಮಾಡಿದ್ದಾರೆ. ಇಲ್ಲಿದೆ ಅಂಧ ಕ್ರಿಕೆಟಿಗ ಹೋರಾಟದ ವಿವರ.

Blind cricketer Requested Supreme court to play IPL
Author
Bengaluru, First Published Oct 7, 2018, 11:48 AM IST
  • Facebook
  • Twitter
  • Whatsapp

ಲಕ್ನೋ(ಅ.07): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ )ಟೂರ್ನಿ ಆಡಬೇಕು ಅನ್ನುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಕ್ರಿಕೆಟಿಗರ ಪ್ರತಿಭೆಗೆ ಅತ್ಯುತ್ತಮ ವೇದಿಕೆಯಾಗಿರುವ ಐಪಿಎಲ್, ಆತನ ಆರ್ಥಿಕ ಸ್ಥಿತಿಯನ್ನ ಉತ್ತಮ ಪಡಿಸಲಿದೆ. ಹೀಗಾಗಿ ಐಪಿಎಲ್ ಟೂರ್ನಿ ಅಂದರೆ ಸಾಕು ಭಾರತೀಯರು ಮಾತ್ರವಲ್ಲ ವಿದೇಶಿ ಕ್ರಿಕೆಟಿಗರು ಮುಗಿ ಬೀಳುತ್ತಾರೆ.

ಇದೇ  ಐಪಿಎಲ್ ಟೂರ್ನಿಯಲ್ಲಿ ತನ್ನನ್ನ ಸೇರಿಸಿಕೊಳ್ಳಿ ಎಂದು ಅಂಧ ಕ್ರಿಕೆಟಿಗನೊಬ್ಬ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.  ಉತ್ತರ ಪ್ರದೇಶದ ಅಂಧ ಕ್ರಿಕೆಟಿಗರೊಬ್ಬರು ತನಗೂ ಐಪಿಎಲ್ ಆಡಲು ಅವಕಾಶ ಮಾಡಿಕೊಡಿ ಎಂದು ಇದೀಗ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. 

ಈ ಕುರಿತು ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಅವರು ಈ ಸಂಬಂಧ ಬಿಸಿಸಿಐಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.  2019 ಐಪಿಎಲ್ ಆವೃತ್ತಿಯಲ್ಲಿ ತನ್ನನ್ನು ಸೇರಿಸಿಕೊಳ್ಳಿ ಎಂಬ ಅರ್ಜಿ ಸಲ್ಲಿಸಿ ರುವ ಅಂಧ ಕ್ರಿಕೆಟಿಗ ಯಾರೆಂಬುದು ತಿಳಿದು ಬಂದಿಲ್ಲ.

Follow Us:
Download App:
  • android
  • ios