ಎಲಿಯಟ್ ನ್ಯೂಜಿಲೆಂಡ್ ಪರ 5 ಟೆಸ್ಟ್, 83 ಏಕದಿನ ಮತ್ತು 17 ಟಿ20 ಪಂದ್ಯಗಳನ್ನಾಡಿದ್ದಾರೆ. ಎಲಿಯಟ್, ಕಳೆದ ವರ್ಷ ಪಾಕಿಸ್ತಾನ ವಿರುದ್ಧ ವಿಶ್ವ ಇಲೆವೆನ್ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.
ವೆಲ್ಲಿಂಗ್ಟನ್[ಆ.23]: ದಕ್ಷಿಣ ಆಫ್ರಿಕಾ ಮೂಲದ ನ್ಯೂಜಿಲೆಂಡ್ ಆಲ್ರೌಂಡರ್ ಗ್ರ್ಯಾಂಟ್ ಎಲಿಯಟ್, ಬುಧವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. 39 ವರ್ಷದ ಎಲಿಯಟ್, ತಮ್ಮ ನಿವೃತ್ತಿ ವಿಷಯವನ್ನು ಸಾಮಾಜಿಕ ತಾಣದಲ್ಲಿ ಬಹಿರಂಗಪಡಿಸಿದ್ದಾರೆ.
ಎಲಿಯಟ್ ನ್ಯೂಜಿಲೆಂಡ್ ಪರ 5 ಟೆಸ್ಟ್, 83 ಏಕದಿನ ಮತ್ತು 17 ಟಿ20 ಪಂದ್ಯಗಳನ್ನಾಡಿದ್ದಾರೆ. ಎಲಿಯಟ್, ಕಳೆದ ವರ್ಷ ಪಾಕಿಸ್ತಾನ ವಿರುದ್ಧ ವಿಶ್ವ ಇಲೆವೆನ್ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.
2015ರ ಏಕದಿನ ವಿಶ್ವಕಪ್’ನ ಸೆಮಿಫೈನಲ್ ಪಂದ್ಯದಲ್ಲಿ ಡೇಲ್ ಸ್ಟೇನ್ ಬೌಲಿಂಗ್’ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ನ್ಯೂಜಿಲೆಂಡ್ ತಂಡವನ್ನು ಫೈನಲ್’ಗೇರುವಂತೆ ಮಾಡಿದ್ದು ಅವರ ಸ್ಮರಣೀಯ ಇನ್ನಿಂಗ್ಸ್’ಗಳಲ್ಲಿ ಒಂದು.
ಹೀಗಿತ್ತು ಆ ಕ್ಷಣ:

ಎಲಿಯಟ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ‘ಜೋಹಾನ್ಸ್‌ಬರ್ಗ್‌ನಲ್ಲಿ ಆರಂಭಿಸಿ, ಬರ್ಮಿಂಗ್‌ಹ್ಯಾಮ್‌ನಲ್ಲಿ ನನ್ನ ಆಟ ಮುಗಿಸಿದ್ದೇನೆ. 27 ವರ್ಷಗಳ ನನ್ನ ವೃತ್ತಿ ಜೀವನದ ಪ್ರತಿ ಕ್ಷಣವನ್ನು ಇಷ್ಟಪಟ್ಟಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.