ತಮ್ಮ 23ನೇ ವಯಸ್ಸಿನಲ್ಲೇ ಮಿಶ್ರ ಡಬಲ್ಸ್’ನಲ್ಲಿ ಗ್ರಾಂಡ್’ಸ್ಲಾಂ ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. 1997ರಲ್ಲಿ ಫ್ರೆಂಚ್ ಓಪನ್’ನಲ್ಲಿ ಜಪಾನ್’ನ ರಿಕಾ ಹಿರಾಕಿ ಜತೆಗೂಡಿ ಚಾಂಪಿಯನ್ ಆಗುವ ಮೂಲಕ ಇತಿಹಾಸ ಬರೆದಿದ್ದರು.

ಬೆಂಗಳೂರು[ಜೂ.07]: ಭಾರತ ತಂಡದ ಹಿರಿಯ ಟೆನಿಸಿಗ ಮಹೇಶ್ ಭೂಪತಿ 44ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಭಾರತ ಟೆನಿಸ್ ಲೋಕ ಕಂಡ ಯಶಸ್ವಿ ಆಟಗಾರರಲ್ಲಿ ಚೆನ್ನೈ ಮೂಲದ ಮಹೇಶ್ ಶ್ರೀನಿವಾಸನ್ ಭೂಪತಿ ಕೂಡಾ ಒಬ್ಬರು.
ತಮ್ಮ 23ನೇ ವಯಸ್ಸಿನಲ್ಲೇ ಮಿಶ್ರ ಡಬಲ್ಸ್’ನಲ್ಲಿ ಗ್ರಾಂಡ್’ಸ್ಲಾಂ ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. 1997ರಲ್ಲಿ ಫ್ರೆಂಚ್ ಓಪನ್’ನಲ್ಲಿ ಜಪಾನ್’ನ ರಿಕಾ ಹಿರಾಕಿ ಜತೆಗೂಡಿ ಚಾಂಪಿಯನ್ ಆಗುವ ಮೂಲಕ ಇತಿಹಾಸ ಬರೆದಿದ್ದರು. ಇನ್ನು ಪುರುಷರ ಡಬಲ್ಸ್’ನಲ್ಲಿ ಲಿಯಾಂಡರ್ ಪೇಸ್ ಜತೆಗೂಡಿ 1999-ಫ್ರೆಂಚ್ ಓಪನ್, 1999- ವಿಂಬಲ್ಡನ್, 2001ರಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದರು. 
ಮಹೇಶ್ ಭೂಪತಿ ಹುಟ್ಟುಹಬ್ಬಕ್ಕೆ ಕ್ರೀಡಾ ದಿಗ್ಗಜರು ಹಾಗೂ ಅಭಿಮಾನಿಗಳು ಶುಭ ಕೋರಿದ್ದು ಹೀಗೆ...

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…