Asianet Suvarna News Asianet Suvarna News

ಚಾಂಪಿಯನ್ಸ್ ಟ್ರೋಫಿ ಹೀರೋ ಫಖರ್'ನ್ನು ಹುಡುಕಿಕೊಂಡು ಬಂದ ಅದೃಷ್ಟ

27 ವರ್ಷದ ಫಖರ್ ಜಮಾನ್‌ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ 114 ಎಸೆತಗಳಲ್ಲಿ 106 ರನ್ ಬಾರಿಸಿ ಮಿಂಚಿದ್ದರು.

Bilal Malik awards Rs 20 million to Fakhar Zaman
  • Facebook
  • Twitter
  • Whatsapp

ಲಾಹೋರ್(ಜು.03): ಚಾಂಪಿಯನ್ಸ್ ಟ್ರೋಫಿ ಫೈನಲ್‌'ನಲ್ಲಿ ಭಾರತ ವಿರುದ್ಧ ಭರ್ಜರಿ ಶತಕ ಸಿಡಿಸಿ ಪಾಕಿಸ್ತಾನಕ್ಕೆ ಚೊಚ್ಚಲ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರಂಭಿಕ ಆಟಗಾರ ಫಖರ್ ಜಮಾನ್‌'ಗೆ ಬಂಪರ್ ಉಡುಗೊರೆ ಸಿಕ್ಕಿದೆ.

ಹೌದು ಪಾಕಿಸ್ತಾನದ ಉದ್ಯಮಿ ಬಿಲಾಲ್ ಮಲಿಕ್ ಎಂಬುವರರು ಜಮಾನ್‌'ಗೆ 2 ಕೋಟಿ ರುಪಾಯಿ ಉಡುಗೊರೆಯಾಗಿ ನೀಡಿದ್ದಾರೆ.

ಪಾಕಿಸ್ತಾನದ ಹೆಸರಾಂತ ಉದ್ಯಮಿಯಾಗಿರುವ ಮಲಿಕ್ ರಿಯಾಜ್ ಅವರ ಮೊಮ್ಮಗ ಬಿಲಾಲ್, 2 ಕೋಟಿ ರುಪಾಯಿ ಚೆಕ್ ಅನ್ನು ಫಖರ್‌'ಗೆ ಹಸ್ತಾಂತರಿಸಿದರು.

ಈ ವೇಳೆ ಜಮಾನ್ ತಾವು ಉತ್ತಮ ಪ್ರದರ್ಶನ ಮುಂದುವರೆಸುವುದರೊಂದಿಗೆ ದೇಶ ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಭರವಸೆ ನೀಡಿದರು.

27 ವರ್ಷದ ಫಖರ್ ಜಮಾನ್‌ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ 114 ಎಸೆತಗಳಲ್ಲಿ 106 ರನ್ ಬಾರಿಸಿ ಮಿಂಚಿದ್ದರು.

 

Follow Us:
Download App:
  • android
  • ios