ಅಂಪೈರ್ ಒಂದು ಕ್ಷಣ ಮೈಮರೆತು ಬಿಟ್ಟಿದ್ದರು. ಅಷ್ಟೇ ಬೌಲರ್ ಓವರ್ ಮುಗಿದರೂ ಇನ್ನೊಂದು ಎಸೆತ ಹಾಕಿ ಪ್ರಮುಕ ಬ್ಯಾಟ್ಸ್‌ಮನ್ ವಿಕೆಟ್ ಕಬಳಿಸಿಬಿಟ್ಟರು. ಇದೀಗ ಈ 7ನೇ ಎಸೆತ ಭಾರಿ ವಿವಾದಕ್ಕೆ ಕಾರಣವಾಗಿದೆ. ಇಲ್ಲಿದೆ ಈ ಘಟನೆ ವಿವರ. 

ಪರ್ತ್(ಜ.15):  ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಅಂಪೈರ್ ಮಾಡಿದ ಎಡವಟ್ಟು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಅಂಪೈರ್ ತಪ್ಪಿನಿಂದ ಪ್ರಮುಖ ಬ್ಯಾಟ್ಸ್‌ಮನ್ ವಿಕೆಟ್ ಕಳೆದುಕೊಂಡ ಘಟನೆ ಪರ್ತ್ ಸ್ಕಾರ್ಚರ್ಸ್ ಹಾಗೂ ಸಿಡ್ನಿ ಸಿಕ್ಸರ್ ನಡುವಿನ ಪಂದ್ಯದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ-1 ಬದಲಾವಣೆ ಮಾಡಿದ ಕೊಹ್ಲಿ

ಪತ್‌ರ್‍ ಸ್ಕಾರ್ಚ​ರ್‍ಸ್ರ್‍ನ ಆರಂಭಿಕ ಬ್ಯಾಟ್ಸ್‌ಮನ್‌ ಮೈಕೆಲ್‌ ಕ್ಲಿಂಗರ್‌, ಅಂಪೈರ್‌ಗಳ ಮರೆವಿನಿಂದಾಗಿ ಓವರ್‌ನ 7ನೇ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಬಿಗ್‌ಬ್ಯಾಷ್‌ ಟಿ20 ಲೀಗ್‌ನಲ್ಲಿ ಭಾನುವಾರ ನಡೆದ ಪರ್ತ್ ಸ್ಕಾರ್ಚ​ರ್ಸ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್‌ನ ಬೆನ್‌ ಡ್ವಾರ್ಶುಯಿಸ್‌, ಒಂದೇ ಓವರ್‌ನಲ್ಲಿ 7 ಎಸೆತ ಹಾಕಿದ್ದಾರೆ. 

ಇದನ್ನೂ ಓದಿ:ಪಾಂಡ್ಯ,ರಾಹುಲ್‌ಗಿಂತ ದೊಡ್ಡ ತಪ್ಪು ಮಾಡಿದವ್ರು ಇನ್ನೂ ತಂಡದಲ್ಲಿದ್ದಾರೆ:ಶ್ರೀಶಾಂತ್!

ಆ ಓವರ್‌ನ 7ನೇ ಎಸೆತದಲ್ಲಿ ಕ್ಲಿಂಗರ್‌ ಔಟಾದರು. ಬಳಿಕ ಅಂಪೈರ್‌ಗಳು ಎಚ್ಚೆತ್ತುಕೊಂಡರೂ, ಬ್ಯಾಟ್ಸ್‌ಮನ್‌ ಹೊರನಡೆಯಬೇಕಾಯಿತು. ಕ್ರಿಕೆಟ್‌ ಆಸ್ಪ್ರೇಲಿಯಾ ಅಂಪೈರ್‌ಗಳ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.